

ಕಲಬುರಗಿ: ವಲಸೆ ಕಾರ್ಮಿಕರನ್ನು ತವರಿಗೆ ಕರೆತರುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷೃ ಧೋರಣೆ ತಾಳಿದ್ದು, ಕೂಡಲೇ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಮಾಜಿ ಸಚಿವ ಮತ್ತು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆಯವರು ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತಂತೆ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಮೂಲಭೂತ ಹಕ್ಕು ಪ್ರತಿಪಾದಿಸುವ ಸಂವಿಧಾನದ ಆರ್ಟಿಕಲ್ 14, 19 ಹಾಗೂ 21ನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಅವರು ರಿಟ್ನಲ್ಲಿ ಪ್ರತಿಪಾದಿಸಿದ್ದಾರೆ.
ಲಾಕಡೌನ್ ಮತ್ತು ಸರ್ಕಾರದ ನಿಯಮಗಳಿಂದಾಗಿ ಹೊರ ರಾಜ್ಯಗಳಲ್ಲಿ ಸಾವಿರಾರು ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸಿಕ್ಕುಬಿದ್ದಿದ್ದಾರೆ. ಇವರನ್ನು ಮರಳಿ ಕಲಬುರಗಿ ಜಿಲ್ಲೆಗೆ ಕರೆಸುವಂತೆ ಮುಖ್ಯಮಂತ್ರಿಗೆ ನಾನು ಮಾರ್ಚ್ನಲ್ಲಿಯೇ ಪತ್ರ ಬರೆದಿದ್ದೆ. ಆದರೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷೃ ತಾಳಿದ್ದು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಅಜರ್ಿಯಲ್ಲಿ ಪ್ರಾರ್ಥಿಸಿದ್ದಾರೆ.
ಲಾಕಡೌನ್ನಿಂದಾಗಿ ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಅಸಂಖ್ಯಾತ ಕನ್ನಡಿಗರು ಉದ್ಯೋಗ ಕಳೆದುಕೊಂಡು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಮಾರ್ಚ್ 28ರಂದು, ಮೇ ಎರಡು ಮತ್ತು ಒಂಬತ್ತರಂದು ಹೀಗೆ ಮೂರು ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆದು ಹೊರ ದೇಶದವರನ್ನು ವಿಶೇಷ ವಿಮಾನಗಳ ಮೂಲಕ ಕರೆಸಿದಂತೆ ವಲಸೆ ಕಾರ್ಮಿಕರನ್ನು ಕೂಡಲೇ ಮರಳಿ ಕರೆಸಬೇಕೆಂದು ಕೋರಿದೆ. ಇದಕ್ಕೆ ಸರ್ಕಾರ ಪ್ರತಿಕ್ರಿಯೆ ನೀಡಲಿಲ್ಲ.
ಕೊನೆಗೆ ತಮಗೆ 150 ಬಸ್ಸುಗಳನ್ನು ಬಾಡಿಗೆಗೆ ನೀಡಿದರೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ಗೋವಾದಿಂದ ವಲಸಿಗರನ್ನು ಕರೆಸುವೆ ಎಂದು ಸಹ ಮನವಿ ಮಾಡಿದೆ. ಬಸ್ಸುಗಳಿಗೆ ಕಾಂಗ್ರೆಸ್ ಪಕ್ಷ ಬಾಡಿಗೆ ಭರಿಸುತ್ತದೆ ಎಂದು ತಿಳಿಸಿದೆ. ಈ ಕುರಿತಂತೆ ಎನ್ಇಕೆಆರ್ಟಿಸಿ ಎಂಡಿಯವರಿಗೂ ಪತ್ರ ಬರೆದೆ ಎಂದು ಖರ್ಗೆ ವಿವರಿಸಿದ್ದಾರೆ.
ತಮ್ಮ ಪತ್ರವನ್ನು ಆಧರಿಸಿ ಎಂಡಿಯವರು ಕಲಬುರಗಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಕ್ತ ಆದೇಶಕ್ಕೆ ಕೋರಿದರು. ಮುಂದು ಜಿಲ್ಲಾಧಿಕಾರಿಯವರು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ನಿರ್ದೇಶನ ಕೋರಿದ್ದಾರೆ. ಆದರೂ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲವೆಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
ಈ ನಡುವೆ ವಲಸೆ ಕಾರ್ಮಿಕರು ಸಹಸ್ರ ಸಂಖ್ಯೆಯಲ್ಲಿ ಬಂದು ರಾಜ್ಯದ ಗಡಿಭಾಗದಲ್ಲಿ ಜಮಾವಣೆಗೊಂಡರು. ಆದರೆ ಚೆಕ್ ಪೋಸ್ಟಗಳಲ್ಲಿ ಅವರನ್ನು ಬಿಡದೇ ಊಟ ವಸತಿ ವ್ಯವಸ್ಥೆ ಮಾಡದೇ ನಿರ್ಲಕ್ಷೃ ತೋರಿದ್ದಾರೆ ಎಂದು ರಿಟ್ನಲ್ಲಿ ಶಾಸಕರು ವಿವರಿಸಿದ್ದಾರೆ.
ಈ ಕೂಡಲೇ ವಲಸೆ ಕಾರ್ಮಿಕರನ್ನು ಕರೆತರಲು ಬಸ್ ವ್ಯವಸ್ಥೆ ಕಲ್ಪಿಸುವಂತೆ, ಅವರಿಗೆ ಸೂಕ್ತವಾದ ಆರೋಗ್ಯ ತಪಾಸಣೆ ನಡೆಸಿ, ಕೋವಿಡ್ 19 ವೈರಸ್ ತಗುಲದಂತೆ ಸೂಕ್ತ ವಸತಿ ವ್ಯವಸ್ಥೆಯುಳ್ಳ ವಸತಿನಿಲಯಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡುವಂತೆ, ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಖರ್ಗೆ ಹೈಕೋರ್ಟ್ಗೆ ಪ್ರಾರ್ಥಿಸಿದ್ದಾರೆ.
ಶಾಸಕರು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ , ಕಲಬುರಗಿ ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ ಕಾರ್ಯದರ್ಶಿ , ಹಾಗೂ ವ್ಯವಸ್ಥಾಪಕ ನಿರ್ದೇಶಕರು ಈಶಾನ್ಯ ಕರ್ನಾಟ ಕ ಸಾರಿಗೆ ಸಂಸ್ಥೆ ಕಲಬುರಗಿ ಇವರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ.