ಹೈಕೋರ್ಟ್ ಜಾಮೀನು, ಶರಣರ ಬಿಡುಗಡೆಗೆ ಕೋರ್ಟ್ ಆದೇಶ

1d9da467-264c-4f10-918d-adb68d250735-02
Published on

ಚಿತ್ರದುರ್ಗ: ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಶರಣರಿಗೆ ಹೈಕೋರ್ಟ್ ಜಾಮೀನು ನೀಡಿರುವ ಕುರಿತಂತೆ 2ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಬುಧವಾರ ತನ್ನ ಆದೇಶವನ್ನು ಪ್ರಕಟಿಸಿದ್ದು,ಇಬ್ಬರ ಶ್ಯೂರಿಟಿಯನ್ನು ಒಪ್ಪಿರುವ ನ್ಯಾಯಾಲಯ ಮೊದಲನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುರುಘಾ ಶರಣರ ಬಿಡುಗಡೆಗೆ ಆದೇಶಿಸಿತು. ಶರಣರ ಪರ ವಕೀಲರು ಇಂದೇ ಶರಣರು ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು. ಆದರೆ ಸರ್ಕಾರಿ ಅ ಭಿಯೋಜಕರು ಎರಡನೇ ಕೇಸ್‌ನಲ್ಲಿ ಬಾಡಿ ವಾರೆಂಟ್ ಕೇಳಿದ್ದು, ಇದರ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ. ಆದ್ದರಿಂದ ಸ್ವಾಮೀಜಿ ಅವರು ಇಂದು ಜೈಲಿನಿಂದ ಬಿಡುಗಡೆ ಆಗುವುದು ಅಸಾಧ್ಯ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net