ಹೈಕ ಹೋರಾಟ ಮ್ಯೂಸಿಯಂ ಸ್ಥಾಪನೆ

Amrut goure
Published on

ಕಲಬುರಗಿ: ಐತಿಹಾಸಿಕ ಹೈದರಾಬಾದ್ ಕರ್ನಾಟಕ ರಾಜ್ಯ ವಿಮೋಚನೆ ಮತ್ತು ಕಲಂ ೩೭೧(ಜೆ) ಸ್ಮಾರಕ ವಸ್ತುಸಂಗ್ರಹಾಲಯ ಸ್ಥಾಪಿಸಲು ಉದ್ದೇಶಿಸಿದ್ದು, ಐತಿಹಾಸಿಕ ಕಾರ್ಯಕ್ಕೆ ಸಾರ್ವಜನಿಕರು, ಪ್ರವಾಸೋದ್ಯಮ ಇಲಾಖೆ ಹಾಗೂ ಕೆಕೆಆರ್‌ಡಿಬಿ ನೆರವು ನೀಡಬೇಕು ಎಂದು ಮ್ಯೂಸಿಯಂ ಅಧ್ಯಕ್ಷ ಅಮೃತ ಗೌರೆ ಮನವಿ ಮಾಡಿದರು.
ಕಮಲಾಪುರ ತಾಲೂಕಿನಲ್ಲಿ ಮೂರು ಎಕರೆ ಪ್ರದೇಶದಲ್ಲಿ ಮ್ಯೂಸಿಯಂ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಮ್ಯೂಸಿಯಂನಲ್ಲಿ ಐತಿಹಾಸಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಕೇಂದ್ರಗಳೆಂಬ ಮೂರು ವಿಭಾಗ ಇರಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐತಿಹಾಸಿಕ ವಿಭಾಗದಲ್ಲಿ ಹೈದರಾಬಾದ್ ನಿಜಾಮ ಸಂಸ್ಥಾನದ ನಿರಂಕುಶ ಪ್ರಭುತ್ವದಿಂದ ಬಿಡುಗಡೆ ಹೊಂದಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ತ್ಯಾಗ, ಬಲಿದಾನ, ಹುತಾತ್ಮರನ್ನು ಪರಿಚಯಿಸಲಾಗುವುದು. ರಾಜಕೀಯ ವಿಭಾಗದಲ್ಲಿ ಕಲ್ಯಾಣ ಕರ್ನಾಟಕವನ್ನು ಹೊಸ ಮನ್ವಂತರಕ್ಕೆ ಕೊಂಡ್ಯೊಯ್ದ ೩೭೧(ಜೆ) ಕೊಡುಗೆ, ಅದಕ್ಕೆ ಕಾರಣವಾದವರ ಶ್ರಮದ ಕುರಿತು ಬೆಳಕು ಚೆಲ್ಲುವ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಯುವಜನರಿಗೆ ಸೇನಾ ತರಬೇತಿ, ಪರಿಸರ ಪ್ರೇಮ, ದೇಶ ಪ್ರೇಮ ಕುರಿತು ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳುವ ಉz್ದÉÃಶಗಳಿವೆ ಎಂದರು. ಮಾಹಿತಿಗೆ, ಪ್ರೋತ್ಸಾಹ ನೀಡಲು, ವಸ್ತುಗಳನ್ನು ಒದಗಿಸಲು ೮೦೫೦೯೨೬೧೯೭ಗೆ ಸಂಪರ್ಕಿಸಲು ಕೋರಿದರು.
ಸ್ವಾತಂತ್ರö್ಯ ಹೋರಾಟಗಾರ ಅಪ್ಪಾರಾವ ಪಾಟೀಲರ ವಂಶಸ್ಥ ಬಿ.ಎ.ಪಾಟೀಲ್ ಮಾತನಾಡಿ, ಮ್ಯೂಸಿಯಂ ಮೂರ್ನಾಲ್ಕು ಹಂತಗಳಲ್ಲಿ ಸ್ಥಾಪಿಸುವ ಉz್ದÉÃಶವಿದೆ. ಜೀವಂತ, ಚಲನಶೀಲ ಮ್ಯೂಸಿಯಂ ಮಾಡುವ ಕನಸು ಇದೆ ಎಂದರು.

ಬಾಕ್ಸ್
ಏನಿರಲಿದೆ ಮ್ಯೂಸಿಯಂನಲ್ಲಿ?
ಮ್ಯೂಸಿಯAನಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಹೋರಾಟಗಾರರ ಚರಿತ್ರೆ, ಅವರು ಧರಿಸಿದ್ದ ಕೈಗಡಿಯಾರ, ಕನ್ನಡ, ಬಟ್ಟೆ ಸೇರಿ ಬಳಸಿದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗುವುದು. ಮಹಾನ್ ಪುರುಷರ ಸ್ಮಾರಕ, ವಿಜಯ ಸ್ಥಂಭ, ವೀರಗಲ್ಲು ಸ್ಥಾಪಿಸಲಾಗುವುದು. ಸಂಬAಧಿಕರು ಹೋರಾಟಗಾರರ ವಸ್ತುಗಳನ್ನು ಮ್ಯೂಸಿಯಂಗೆ ದಾನರೂಪದಲ್ಲಿ ನೀಡಬೇಕು ಎಂದು ಅಮೃತ ಗೌರೆ ಕೋರಿದರು.

ಕೋಟ್
ನಿಜಾಮನ ನಿರಂಕುಶ ಪ್ರಭುತ್ವದಿಂದ ಬಿಡುಗಡೆ ಹೊಂದಲು ಹೈಕ ಮುಕ್ತಿಗಾಗಿ ಹೋರಾಡಿದ ಮಣ್ಣಿನ ಮಕ್ಕಳ ತ್ಯಾಗ, ಬಲಿದಾನ ಮುಂದಿನ ಪೀಳಿಗೆಗೆ ತಿಳಿಸಲು ವಸ್ತುಸಂಗ್ರಹಾಲಯ ಸ್ಥಾಪಿಸುತ್ತಿದ್ದು, ಎಲ್ಲರೂ ಸಹಕಾರ ನೀಡಬೇಕು.
| ಅಮೃತ ಗೌರೆ, ಅಧ್ಯಕ್ಷ ಹಿಸ್ಟಾರಿಕ ಹೈಕ ಸ್ಟೇಟ್ ಪಾರ್ಟಿಷನ್
ಆ್ಯಂಡ್ ದ ಗ್ರೇಟ್ ಆರ್ಟಿಕಲ್ ೩೭೧ ಜೆ ಮೆಮೋರಿಯಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net