ಹೈಕ ವಿರೋಧ ಖಂಡಿಸಿ ಜ್ಯೋತಿ ಯಾತ್ರೆ

Saibanna jamadar
Published on

ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಜಾರಿಗೆ ಬಂದಿರುವ ೩೭೧ (ಜೆ) ಕಲಂ ಸಮರ್ಪಕ ಅನುಷ್ಠಾನಗೊಳಿಸಲು ಆಗ್ರಹಿಸಿ, ಸರ್ಕಾರಗಳ ಹೈಕ ವಿರೋಧಿ ಧೋರಣೆ ಖಂಡಿಸಿ ಚಿಂಚೋಳ್ಳಿಯಿAದ ಬೆಂಗಳೂರಿನವರೆಗೆ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಚಿಂತಕರ ವೇದಿಕೆ ಅಧ್ಯಕ್ಷ ಸೈಬಣ್ಣ ಜಮಾದಾರ ಹೇಳಿದರು.
೩೭೧ (ಜೆ) ಕಲಂ ಹೋರಾಟಗಾರರಾಗಿದ್ದ ದಿ.ವೈಜನಾಥ ಪಾಟೀಲ ಅವರ ಚಿಂಚೋಳಿಯಲ್ಲಿನ ಸಮಾಧಿ ಸ್ಥಳದಿಂದ ಆ.೧೩ರಂದು ಯಾತ್ರೆ ಆರಂಭವಾಗಲಿದ್ದು, ಆ.೨೯ರಂದು ಬೆಂಗಳೂರಿನ ಸ್ವಾತಂತ್ರÈ ಉದ್ಯಾನದಲ್ಲಿ ಜ್ಯೋತಿಯಾತ್ರೆ ಪೂರ್ಣಗೊಳ್ಳಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಕ ಹೊರತುಪಡಿಸಿ ಅನ್ಯ ಜಿಲ್ಲೆಗಳಲ್ಲೂ ಶೇ.೮ ಮೀಸಲು ಒದಗಿಸಬೇಕು, ಈ ಭಾಗದ ಖಾಸಗಿ ಕಾರ್ಖಾನೆ, ಕಂಪನಿ, ಕೈಗಾರಿಕೆಗಳಲ್ಲಿ ಶೇ.೮೦ ಮೀಸಲು ಒದಗಿಸಬೇಕು, ಕೇಂದ್ರ ಸರ್ಕಾರದಿಂದ ಕಕ ಭಾಗಕ್ಕೆ ಮೂರು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಬೇಕು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ ಅವ್ಯವಹಾರ ಕುರಿತು ತನಿಖೆ ನಡೆಸಬೇಕು, ಕಕ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂಬುದು ಸೇರಿ ವಿವಿಧ ಒತ್ತಾಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ವಿಜಯಕುಮಾರ ಮಠಪತಿ, ಯಶ್ವಂತರಾವ ಸೂರ್ಯವಂಶಿ, ಪ್ರಕಾಶ ಪಟ್ಟೇದಾರ, ರಾಜು ನೂಲಕರ, ಶಿವಕುಮಾರ ಪಾಟೀಲ್, ರಾಮು ಪವಾರ, ಸಂತೋಷ ಪೂಜಾರಿ, ಸತೀಶ ಹುಗ್ಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net