ಹೈ. ಕೋರ್ಟ್ ನ್ಯಾಯಾಧೀಶರಿಗೆ ಪತ್ರ

24 YERRISWAMY 05
Published on

ಬಳ್ಳಾರಿ : ತಾಲೂಕಿನ ಕುಡಿತಿನಿಯಲ್ಲಿ ಕಳೆದ ಒಂದು ವರ್ಷಕ್ಕೂ ಅಧಿಕ ದಿನಗಳಿಂದ ಹೋರಾಟ ನಡೆಸುತ್ತಿರುವ ಭೂ ಸಂತ್ರಸ್ತ ರೈತರಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದ ಕಾರಣ ಕೆಪಿಆರ್‌ಎಸ್ ಹಾಗೂ ಸಿಐಟಿಯು ನೇತೃತ್ವದಲ್ಲಿ ಹೈಕೋರ್ಟ್ ನ್ಯಾಯಾಧೀಶರಿಗೆ ನ್ಯಾಯಬೇಕು ಎಂದು ಪತ್ರ ಬರೆದು ಇಲ್ಲಿನ ಅಂಚೆ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿದರು.
ಕೆಪಿಆರ್‌ಎಸ್ ಸಂಘಟನೆ ಮುಖಂಡ ಯು. ಬಸವರಾಜ ಮಾತನಾಡಿ, ಆರ್ಷಲ್ ಮಿತ್ತಲ್, ಉತ್ತಮ್ ಗಾಲ್ವಾ(ಬ್ರಾಹ್ಮಿಣಿ), ಎನ್‌ಎಂಡಿಸಿ ಕಂಪನಿಗಳಿಗೆ ಕಳೆದ ಹದಿನಾಲ್ಕು ವರ್ಷಗಳ ಹಿಂದೆ ಕಾರ್ಖಾನೆಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರ ಕೆಐಡಿಬಿ ಮೂಲಕ ಬಲವಂತವಾಗಿ ಮೋಸದ ಬೆಲೆ ನೀಡಿ ಸಾವಿರಾರು ಎಕರೆ ಪ್ರದೇಶ ಭೂಮಿ ಖರೀದಿಸಿದ್ದಾರೆ. ಭೂಮಿ ನೀಡಿದ ರೈತರಿಗೆ ನ್ಯಾಯವಾದ ಬೆಲೆ ನೀಡಿ ಕೈಗಾರಿಕೆಗಳು ಸ್ಥಾಪಿಸಲಾಗುವುದು. ಭೂಮಿ ನೀಡಿದ ಕುಟುಂಬಗಳಿಗೆ ಉದ್ಯೋಗ ನೀಡಲಾಗವುದು ಎಂದು ಸರ್ಕಾರ ಭರವಸೆ ನೀಡಿ ಕಾಲಹರಣ ಮಾಡುತ್ತಿದೆ. ಹೀಗಾಗಿ ಹೈಕೋರ್ಟ್ ನ್ಯಾಯಾಧೀಶರಿಗೆ ಈ ಕುರಿತು ಪತ್ರ ಬರೆದು ನ್ಯಾಯ ದೊರಕಿಸಿ ಕೊಡಿ ಎಂದು ಒತ್ತಾಯಿಸಿದರು. ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದ ರೈತರಿಗೆ ಎಕರೆಗೆ 30 ಲಕ್ಷ ರೂ. ನೀಡಿ ಎಂದು ಕೋರ್ಟ್ ತೀರ್ಪು ನೀಡಿ ಆದೇಶ ಹೊರಡಿಸಿದೆ. ಆದರೂ ಇಲ್ಲಿಯವರೆಗೆ ಹಣ ನೀಡಿಲ್ಲ ಕಂಪನಿಗಳ ವಿರುದ್ಧ ಅಕ್ರೋಶ ಹೊರಹಾಕಿದರು.
ನಗರದ ಗವಿಯಪ್ಪ ವೃತ್ತದಿಂದ ಅಂಚೆ ಕಚೇರಿಗೆ ತೆರಳಿ ಜಾಥಾ ಮೂಲಕ ತೆರಳಿ ಅಂಚೆ ಕಚೇರಿಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net