ಕಾವೇರಿ ನಿಗಮದ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಜಲ ಸಂಪನ್ಮೂಲ ಇಲಾಖೆ ತಾಂತ್ರಿಕ ಸಲಹೆಗಾರ ಕೆ.ಜೈಪ್ರಕಾಶ್, ತಾಂತ್ರಿಕ ವರದಿಯ ಪ್ರಮುಖಾಂಶ ಬಿಡುಗಡೆ ಮಾಡಿ ಮಾತನಾಡಿದ ಅವರು, ಡಿಸಿಎಂ ಸಲಹೆಯಂತೆ "ಶ್ರೀರಂಗ ಕುಡಿಯುವ ನೀರು ಪೂರೈಕೆ ಯೋಜನೆ' (ಕುಣಿಗಲ್ ಲಿಂಕ್ ಕಾಲುವೆ) ವಸ್ತುಸ್ಥಿತಿ ಜನರ ಮುಂದಿಡಲಾಗುತ್ತಿದೆ. ಈ ಯೋಜನೆ ಬಗ್ಗೆ ತುರುವೇಕೆರೆ, ಗುಬ್ಬಿ, ತುಮಕೂರು ತಾಲೂಕುಗಳ ಜನರಿಗೆ ಅಪನಂಬಿಕೆ, ಸಂಶಯ ಬೇಡ. ರಾಷ್ಟ್ರೀಯ ಜಲನೀತಿ ಪ್ರಕಾರ ಕುಡಿಯುವ ನೀರು ಪೂರೈಕೆಗೆ ವಿರೋಧ, ಅಡ್ಡಿಗೆ ಅವಕಾಶಗಳೇ ಇಲ್ಲ ಎಂದರು.