ಹೇಮರೆಡ್ಡಿ ಮಲ್ಲಮ್ಮಳ ಆದರ್ಶ ಪಾಲಿಸಲಿ

14MDLG2
Published on

ಮೂಡಲಗಿ: ಸಮಾಜಕ್ಕೆ ಆದರ್ಶವಾಗಿ ಬದುಕಿ ಸ್ತ್ರೀಲೋಕದ

ನತೆ ಹೆಚ್ಚಿಸಿದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ

ಮೂರ್ತಿ ಪ್ರತಿಷ್ಠಾಪಿಸಿದ್ದು ಶ್ಲಾನೀಯ ಎಂದು ಸಾರಿಗೆ

ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ತಾಲೂಕಿನ ಕಾಮನಕಟ್ಟಿ ಗ್ರಾಮದಲ್ಲಿ ಶಿವಶರಣೆ

ಹೇಮರೆಡ್ಡಿ ಮಲ್ಲಮ್ಮಳ ಮೂರ್ತಿ ಅನಾವರಣ ಮತ್ತು ವತ್ತ

ಉದ್ಘಾಟಿಸಿ ಮಾತನಾಡಿದರು. ಶರಣೆ

ಮಲ್ಲಮ್ಮಎದುರಿಸಿದ ಕಷ್ಟ, ಅವಳ ತ್ಯಾಗ

ಮತ್ತು ದೆವಿಭಕ್ತಿ ಸಮಾಜಕ್ಕೆ ಬಹುದೊಡ್ಡ

ಸಂದೇಶವಾಗಿದೆ. ಅವಳ ಮೂರ್ತಿ ಅನಾವರಣ ಮಾಡುವ

ಭಾಗ್ಯ ನನ್ನದಾಗಿರುವುದಕ್ಕೆ ಖುಷಿಯಾಗಿದೆ. ಸಮಾಜ

ಮಲ್ಲಮ್ಮಳ ಆದರ್ಶಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆದು

ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಮೆರವಣಿಗೆ: ಹೇಮರೆಡ್ಡಿ ಮಲ್ಲಮ್ಮಳ ಮೂರ್ತಿ

ಮೆರವಣಿಗೆಯು ಕುಂಭಮೇಳ ಮತ್ತು ವಿವಿಧ

ವಾದ್ಯಗಳೊಂದಿಗೆ ಪ್ರತಿಷ್ಠಾಪನೆಯ ಸ್ಥಳಕ್ಕೆ

ಬರಮಾಡಿಕೊಳ್ಳಲಾಯಿತು. ಮೂರ್ತಿಗೆ

ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆ

ನೆರವೇರಿಸಲಾಯಿತು.

ಎರೆಹೊಸಳ್ಳಿಯ ಮಹಾಯೋಗಿ ವೇಮನ್​ ಸಂಸ್ಥಾನ

ಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಯುವ ಮುಖಂಡ ಸವೋರ್ತ್ತಮ ಜಾರಕಿಹೊಳಿ,

ಗ್ರಾಪಂ ಅಧ್ಯೆ ಶಾಂತವ್ವ ಮೋಡಿ, ಉಪಾಧ್ಯೆ ಸುವರ್ಣ

ಮುಲಿಮಾನಿ, ಸದಸ್ಯರಾದ ಬಸಪ್ಪ ಮಸಾರಡ್ಡಿ,

ಗೋವಿಂದಪ್ಪ ಉದಪುಡಿ, ಲ್ಮವ್ವ ಗಾಣಗಿ ಹಾಗೂ

ಸಮುದಾಯದ ಮುಖಂಡರು ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net