

ಚಿತ್ರದುರ್ಗ: ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ನೂತನ ಅಧ್ಯಕ್ಷರಾಗಿ ಬಸವೇಶ್ವರ ಆಸ್ಪತ್ರೆಯ ಡಾ. ಪಾಲಾಕ್ಷಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಜಿ. ಚಿದಾನಂದಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದು ಸಮಾಜದ ಕಾರ್ಯದರ್ಶಿ ಡಿ.ಟಿ. ಶಿವಾನಂದಪ್ಪ ತಿಳಿಸಿದ್ದಾರೆ. ಆಯ್ಕೆ ವೇಳೆ ವಕೀಲ ವಿಶ್ವನಾಥ್, ಖಜಾಂಚಿ ದಯಾನಂದ ಪಾಟೀಲ್, ನಿವೃತ್ತ ಇಂಜಿನಿಯರ್ ಬಸವರಾಜ್ ಇದ್ದರು.