ಹೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ

20MDG2
Published on

ಮುಂಡರಗಿ: ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ರೈತರು ಹೆಸ್ಕಾಂ ಕಚೇರಿ ಮುಖ್ಯ ಗೇಟ್ ಬಂದ್ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.

ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ಕೊರ್ಲಹಳ್ಳಿ ಗ್ರಾಮದ ರೈತರ ಪಂಪ್​ಸೆಟ್​ಗಳಿಗೆ ನಿತ್ಯ ಹಗಲು 6 ತಾಸು ತ್ರಿಫೇಸ್, ರಾತ್ರಿ 4 ತಾಸು ಒಪನ್​ಡೆಲ್ಟ್ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ, ಒಂದು ವಾರದಿಂದ ದಿನಕ್ಕೆ ಒಂದೆರಡು ತಾಸು ವಿದ್ಯುತ್ ನೀಡಲಾಗುತ್ತಿದೆ. ಕೆಲವೊಮ್ಮೆ ಓವರ್​ಲೋಡ್​ನಿಂದ ಮೋಟರ್​ಗಳು ಸುಟ್ಟಿವೆ. ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಇರುವುದರಿಂದ ರೈತರು ಈ ವರ್ಷ ಭತ್ತ, ಕಬ್ಬು, ಮತ್ತಿತರ ಬೆಳೆಗಳನ್ನು ಬೆಳೆದಿದ್ದಾರೆ. ಈಗ ಹೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್ ಪೂರೈಸದ ಕಾರಣ ಬೆಳೆಗಳೆಲ್ಲ ಒಣಗುತ್ತಿವೆ ಎಂದು ದೂರಿದರು.

ಸ್ಥಳಕ್ಕಾಗಮಿಸಿದ ಹೆಸ್ಕಾಂ ಎಇಇ ಎಂ.ಬಿ. ಗೌರೋಜಿ ಅವರು ರೈತರೊಂದಿಗೆ ರ್ಚಚಿಸಿದರು. ತಾಂತ್ರಿಕ ತೊಂದರೆಯಿಂದ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗಿದೆ. ತಕ್ಷಣ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆನಂತರ ರೈತರು ಪ್ರತಿಭಟನೆ ಕೈಬಿಟ್ಟರು.

ರೈತರಾದ ಸುರೇಶ ಹಲವಾಗಲಿ, ಬಾಪೂಜಿ ಮಧ್ಯಪಾಟಿ, ಕೋಟೆಪ್ಪ ಶೀರನಳ್ಳಿ, ಶರಣಪ್ಪ ಕುಂಬಾರ, ಶಶಿ ಪಲ್ಲೇದ, ಜಗದೀಶ ಮೇಟಿ, ಹನುಮಂತ ಶೀರನಹಳ್ಳಿ, ಈರಪ್ಪ ದೊಡ್ಡೆಪ್ಪನವರ, ಮೌಲಾಸಾಬ್ ಕಾತರಕಿ, ಕೋಟೆಪ್ಪ ಕೊಳಲ, ರಂಗಪ್ಪ ಗಾಂಜಿ, ನಾಗರಾಜ ಹಮ್ಮಿಗಿ, ಮಹೇಶ ಪುರದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net