ಹೆಸ್ಕಾಂ ಕಂಪ್ಯೂಟರ್ ಸರ್ವರ್ ಸುಧಾರಿಸಿ

Improve Hescom Computer Server
ವಿಜಯಪುರ ನಗರದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ವತಿಯಿಂದ ಮಂಗಳವಾರ ಹೆಸ್ಕಾಂ ಇಲಾಖೆ ಕಂಪ್ಯೂಟರ್ ಸರ್ವರ್ ಶೀಘ್ರ ಬಗ್ಗೆ ಹರಿಸಬೇಕು ಎಂದು ಆಗ್ರಹಿಸಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ ರೋಷನ್ ಮಹಮ್ಮದ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಉಪಾಧ್ಯಕ್ಷ ನಿಹಾದ ಅಹ್ಮದ ಗೊಡಿಹಾಳ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಎಂ. ಕನ್ನೂರ ಇದ್ದರು.
Published on

ವಿಜಯಪುರ: ವ್ಯವಸ್ಥಿತವಾಗಿ ವಿದ್ಯುತ್ ಸಮಸ್ಯೆ ಸರಬರಾಜು ಮಾಡಲು ಹೆಸ್ಕಾಂ ಇಲಾಖೆಯ ಕಂಪ್ಯೂಟರ್ ಸರ್ವರ್ ಶೀಘ್ರ ಬಗ್ಗೆ ಹರಿಸಬೇಕು ಎಂದು ನಗರದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ವತಿಯಿಂದ ಮಂಗಳವಾರ ವಿಜಯಪುರ ಹೆಸ್ಕಾಂ ಕಚೇರಿಗೆ ಭೇಟಿ ನೀಡಿದ್ದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ ರೋಷನ್ ಅವರಿಗೆ ಮನವಿ ಸಲ್ಲಿಸಲಾಯಿತು.

ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದ ಕಂಪ್ಯೂಟರ್ ಸರ್ವರ್ ಸಮಸ್ಯೆಯಾಗಿದೆ. ಇದರಿಂದ ಗ್ರಾಹಕರಿಗೆ ಬಹಳಷ್ಟು ತೊಂದರೆಯಾಗಿದೆ. 8-10 ವರ್ಷದಿಂದ ಇಲಾಖೆ ಕಂಪ್ಯೂಟರ್ ಮೂಲಕ ಆನ್‌ಲೈನ್ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಸರಿಯಾಗಿ ಕಂಪ್ಯೂಟರ್ ಸರ್ವರ್ ಸಮಸ್ಯೆಯಿಂದ ಈಗಲೂ ಆಫ್‌ಲೈನ್ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಸರ್ಕಾರಿ ನಿಯಮಗಳ ಪ್ರಕಾರ ಇಲಾಖೆ ಅಧಿಕಾರಿಗಳನ್ನು ಎರಡು ವರ್ಷದೊಳಗೆ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಅವರೇ ಗುತ್ತಿಗೆದಾರರಾಗುತ್ತಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ಹೆಸ್ಕಾಂ ಕೂಡಲೇ ಅಂಥ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಮನವಿಯಲ್ಲಿ ಸಮಿತಿ ಒತ್ತಾಯಿಸಿದೆ.
ಇದರ ಜತೆ ಕೆಲವು ಭಾಗಗಳಲ್ಲಿ ಹಗಲು ಕೂಡಾ ಬೀದಿ ದೀಪಗಳು ಉರಿಯುತ್ತಿದ್ದು, ಅವುಗಳ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಉಪಾಧ್ಯಕ್ಷ ನಿಹಾದ ಅಹ್ಮದ ಗೊಡಿಹಾಳ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಎಂ. ಕನ್ನೂರ, ಸಹ ಕಾರ್ಯದರ್ಶಿ ರಮಜಾನ ರಜಾಕಸಾಬ ಶೇಖ, ಅಮರೇಶ ತಿಲಿಯಾಳ, ಶಶಿಕಾಂತ ಹೂಗಾರ, ಬಾದಶಾ ಪಠಾಣ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net