ಹೆಸರು ಬೆಳೆಗೆ ಕಂಟಕ ತಂದ ಹುಬ್ಬಿ ಮಳೆ

ydg03
Published on

ಯಾದಗಿರಿ: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಜಿ¯್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಾಶಿ ಹಂತಕ್ಕೆ ಬಂದ ಹೆಸರು ಬೆಳೆಗೆ ಈ ಮಳೆ ಕಂಟಕ ತಂದAತಾಗಿದೆ.

ನಗರದ ಅಜೀಜ್ ಕಾಲನಿಯಲ್ಲಿ ಚರಂಡಿ ನೀರು ಕೆಲ ಮನೆಗಳಿಗೆ ನುಗ್ಗಿದ ಪರಿಣಾಮ ಜನರಿಗೆ ತೊಂದರೆಯಾಗಿದ್ದು, ವಿಷ ಜಂತುಗಳ ಭಯ ಆವರಿಸಿದೆ. ಸಕಾಲಕ್ಕೆ ನಗರಸಭೆಯಿಂದ ಚರಂಡಿ ಸ್ವಚ್ಛಗೊಳಿಸದ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹರಿದು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಕಾಲ ಕಳೆಯುವಂತಾಗಿದೆ.

ಇನ್ನೂ ರೈಲ್ವೆ ನಿಲ್ದಾಣ ಪಕ್ಕದಲ್ಲಿನ ರೇಕ್ ಪಾಯಿಂಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿಯುತ್ತಿರುವ ಕಾರಣ ಹೊಸಳ್ಳಿ ರಸ್ತೆ ಸಂಪರ್ಕ ಕಡಿತವಾಗಿದೆ. ಇದರಿಂದ ರೇಕ್ ಹೊತ್ತ ನೂರಾರು ಲಾರಿಗಳು ಸಂಚಾರಕ್ಕೆ ಮುಂದಾಗಲಿಲ್ಲ.

ನಗರದ ಗಾಂಧಿ ವೃತ್ತದ ಹಿಂಭಾಗದಲ್ಲಿನ ಹನುಮಾನ ನಗರ, ಚಕ್ಕರ ಕಟ್ಟಾ ಮತ್ತು ಮಾತಾ ಮಾಣಿಕೇಶ್ವರಿ ಕಾಲನಿ, ಮದನಪುರ, ಲಾಡಿಸ್‌ಗಲ್ಲಿಗಳ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು ಸಂಚಾರಕ್ಕೆ ಪರದಾಡುವಂತಾಗಿದೆ.

ಶನಿವಾರ ಸುರಿದ ನಿರಂತರ ಮಳೆಗೆ ಗಡಿ ಭಾಗದ ಗುರುಮಠಕಲï ತಾಲೂಕಿನ ಇಡ್ಲೂರು, ಸಂಕ್ಲಾಪುರ, ಜೈಗ್ರಾಮ, ಚಲ್ಹೇರಿ ಸೇರಿ ಸೇರಿ ಇತರೆ ಗ್ರಾಮಗಳ ರಸ್ತೆ ಸಂಪೂರ್ಣ ಜಲಾವೃತಗೊಂಡಿವೆ. ಅಲ್ಲದೆ ರಸ್ತೆಗಳ ಮೇಲೆ ಭಾರಿ ಗಾತ್ರದ ಮರಗಳು ನೆಲಕಚ್ಚಿದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಭಾನುವಾರ ಇಡೀ ದಿನ ಮಳೆ ಮುಂದುವರೆದಿದೆ. ಹೀಗಾಗಿ ಬಹುತೇಕ ಜನರು ಮನೆ ಬಿಟ್ಟು ಹೊರಗೆ ಹೊಗಲಿಲ್ಲ.

ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ಹೆಸರು, ರಾಶಿ ಹಂತಕ್ಕೆ ಬಂದಿದ್ದು ಮಳೆಯಿಂದ ಫಸಲು ಹಾಳಾಗುವ ಬೀತಿ ಕಾಡುತ್ತಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net