ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ

ctd 18 helmet (2)--004
Published on


ಚಿತ್ರದುರ್ಗ: ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಚಾಲನೆ ಮಾಡುವಂತೆ ಸವಾರರಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ಮತ್ತು ನಾಗರಿಕ ಬಂದೂಕು ತರಬೇತಿ ಶಿಬಿರಾರ್ಥಿಗಳ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಹೆಲ್ಮೆಟ್ ಧರಿಸುವ ಜಾಗೃತಿ ಜಾಥಾಕ್ಕೆ ನಗರದ ಒನಕೆ ಓಬವ್ವ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರ ಜೀವವೂ ಅಮೂಲ್ಯ, ಜೀವ ರಕ್ಷಣೆಯ ಹೊಣೆ ತಮ್ಮಗಳ ಮೇಲಿರುತ್ತದೆ. ತಮ್ಮ ಕುಟುಂಬ ವರ್ಗದವರು ತಮ್ಮ ಮೇಲೆ ಅವಲಂಬಿತವಾಗಿರುತ್ತಾರೆ. ವಾಹನಗಳ ಚಲಾವಣೆ ವೇಳೆ ಯಾವುದೇ ನಿರ್ಲಕ್ಷೃ ಬೇಡ. ಸವಾರರು ತಪ್ಪದೆ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸ ಬೇಕೆಂದು ಹೇಳಿದರು.
ಓಬವ್ವ ವೃತ್ತದಿಂದ ಆರಂಭವಾದ ಜಾಥಾ, ಅಂಬೇಡ್ಕರ್ ವೃತ್ತ, ಬಿಡಿ ರಸ್ತೆ, ಗಾಂಧಿ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕನಕ ವೃತ್ತಕ್ಕೆ ತೆರಳಿ ಮುಕ್ತಾಯಗೊಂಡಿತು.
ಎಎಸ್‌ಪಿ ಕುಮಾರಸ್ವಾಮಿ, ಡಿಎಆರ್ ಡಿವೈಎಸ್‌ಪಿ ಗಣೇಶ್, ಪೊಲೀಸರು ಹಾಗೂ ಬಂದೂಕು ತರಬೇತಿ ಶಿಬಿರಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net