

ಹೆಲ್ಮೆಟ್ ಧರಿಸದ ತಾಯಿ,ಮಗನ ಮೇಲೆ ಪೊಲೀಸರಿಂದ ಹಲ್ಲೆ !
ಚಿಕ್ಕೋಡಿ: ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದ್ವಿಚಕ್ರ ವಾಹನ ತಡೆದು ತಾಯಿ ಮತ್ತು ಮಗನ ಮೇಲೆ ಪೋಲಿಸರು ಮನ ಬಂದಂತೆ ಹಲ್ಲೆ ಮಾಡಿರುವ ಘಟನೆ ಅಂಕಲಿ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರದ ಸಾಂಗಲಿ ಪಟ್ಟಣದ ನಿವಾಸಿಗಳಾದ ಹೃಷಿಕೇಶ ಲಿಂಬಿಗಿಡದ ಹಾಗೂ ಸುಶೀಲಾ ಲಿಂಬಿಗಿಡದ ಹಲ್ಲೆಗೊಳಗಾದವರು.
ಹಲ್ಮೇಟ್ ಹಾಕಿಲ್ಲ ಎಂದು ಪೋಲಿಸರು ದಂಡ ಕಟ್ಟುವಂತೆ ಕೇಳಿದ್ದಾರೆ.ಆವಾಗ ಬೈಕ್ ಸವಾರ ಹೃಷಿಕೇಶ ಮತ್ತು ಪೊಲೀಸರ ನಡುವೇ ವಾಗ್ವಾದ ಉಂಟಾಗಿದೆ. ದಂಡ ಕಟ್ಟಲು ಹಣ ಇರಲಿಲ್ಲ,ಅದಕ್ಕೆ
ಪೊಲೀಸರು ಅವಾಚ ಶಬ್ದಗಳಿಂದ ನಿಂದಿಸಿ, ಮನ ಬಂದತೆ ಥಳಿಸಿದ್ದಾರೆ ಎಂದು ಹೃಷಿಕೇಶ ಹಾಗೂ ಅಚರ ತಾಯಿ ಸುಶೀಲಾ ಆರೋಪಿಸಿದ್ದಾರೆ.
ಯುವಕನ ವಿರುದ್ದ ಅಂಕಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.