

ಅಫಜಲಪುರ: ಬೈರಾಮಡಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗೊಬ್ಬುರ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಿAದ ಆರೋಗ್ಯ ಮೇಳ ಕಾರ್ಯಕ್ರಮ ಸೋಮವಾರ ನಡೆಯಿತು.
ಪಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ.ಅಪರ್ಣಾ ಭದ್ರಶೆಟ್ಟಿ ಮಾತನಾಡಿ, ಸಾಂಕ್ರಾಮಿಕ ಕಾಯಿಲೆಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. 30 ವರ್ಷ ಮೇಲ್ಪಟ್ಟವರು ನಿರಂತರವಾಗಿ ಬಿಪಿ, ಶುಗರ್ ತಪಾಸಣೆ ಮಾಡಿಕೊಳ್ಳಬೇಕು. ನಿರ್ಲಕ್ಷÈ ವಹಿಸಿದರೆ ಹೃದಯಾಘಾತ ಹಾಗೂ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಹೆಲ್ತ್ ಚೆಕ್‌ಅಪ್ ಮಾಡಿಕೊಳ್ಳಬೇಕು. ಸರಿಯಾದ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿP್ಷÀಣಾಧಿಕಾರಿ ಶಶಿಧರ ಬಾಳೆ ಮಾತನಾಡಿ, ಸದ್ಯ ಮಹಾಮಾರಿ ಡೆಂಘೆ ಎಲ್ಲರನ್ನು ಕಾಡುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಡೆಂಘೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ನಡೆಸುವುದಕ್ಕೆ ಪ್ರತಿ ಶುಕ್ರವಾರ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಡೆಂಘೆ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಜನರು ಡೆಂಘೆ ಬಗ್ಗೆ ಭಯ ಬಿಟ್ಟಿ, ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
ಗ್ರಾಪಂ ಪಿಡಿಒ ಅಂಬಾರಾಯ ಕಟ್ಟಿಮನಿ ಮಾತನಾಡಿದರು. ಗ್ರಾಪಂ ಅಧ್ಯP್ಷÀ ಯಶವಂತರಾವ ನಾಗೋಜಿ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯರಾದ ಉದಯ ಅನಿವಾರ, ಮಲ್ಲಿನಾಥ, ಮಾಜಿ ಸದಸ್ಯ ಅಶೋಕ ಗುತ್ತೇದಾರ್, ಆರೋಗ್ಯ ನಿರೀP್ಷÀಣಾಧಿಕಾರಿ ಲಕ್ಷಿö್ಮÃಕಾಂತ ಲಾಲಿ, ಸಮುದಾಯ ಆರೋಗ್ಯ ಅಧಿಕಾರಿ ಶ್ವೇತಾ ಪಾಟೀಲï ಇತರರಿದ್ದರು.