ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳ ವೀಕ್ಷಣೆ

03-GPT-4
Published on

ಗುಂಡ್ಲುಪೇಟೆ: ಮೇ 9ರಂದು ಬಂಡೀಪುರ ಮಾರ್ಗವಾಗಿ ಮಧುಮಲೈಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿ ವಾಪಸ್ ತೆರಳಲು ಹೆಲಿಪ್ಯಾಡ್ ನಿರ್ಮಾಣಕ್ಕೆ ತಮಿಳುನಾಡಿನ ಅಧಿಕಾರಿಗಳು ಸಿದ್ಧ್ದತೆ ನಡೆಸಿದ್ದಾರೆ.


ಸೋಮವಾರ ಅರಣ್ಯ ಇಲಾಖೆಯ ಕಾರ್ಯದರ್ಶಿ ಸುಪ್ರಿಯಾ ಸಾಹು ನೇತೃತ್ವದಲ್ಲಿ ಮಧುಮಲೈ ಸಮೀಪದ ಸಿಂಗಾರ ರಸ್ತೆಯ ಲಕ್ಷ್ಮೀನಗರದ ಬಳಿ ಹೆಲಿಪ್ಯಾಡ್ ನಿರ್ಮಿಸಲು ಸ್ಥಳ ವೀಕ್ಷಣೆ ನಡೆಸಿದರು. ಮೈಸೂರಿಗೆ ವಾಯುಪಡೆ ವಿಮಾನದಲ್ಲಿ ಆಗಮಿಸುವ ಮೋದಿ ಮೇಲುಕಾಮನಗಳ್ಳಿಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸುವರು. ಇಲ್ಲಿಂದ ರಸ್ತೆ ಮಾರ್ಗದಲ್ಲಿ ಮಧುಮಲೈಗೆ ತೆರಳಿ ಆನೆ ಶಿಬಿರಕ್ಕೆ ಭೇಟಿ ನೀಡುವರು. ಅಲ್ಲಿಂದ ವಾಪಸಾಗಲು ಸಿಂಗಾರ್ ಸಮೀಪ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಇದಕ್ಕಾಗಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಉದಕಮಂಡಲ ಜಿಲ್ಲಾಧಿಕಾರಿ ಅಂಬರೀಶ್, ಎಸ್.ಪಿ.ಪ್ರಭಾಕರನ್, ಮಧುಮಲೈ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ವೆಂಕಟೇಶ್ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net