ಹೆರಿಗೆ ಆಸ್ಪತ್ರೆಗೆ 10 ಲಕ್ಷ ರೂ. ಅನುದಾನ: ರಾಜಶೇಖರ ಹಿಟ್ನಾಳ ಭರವಸೆ

Koppal MP Rajashekhar hitnal hospital stoning ceremony koppal
Published on

ಕೊಪ್ಪಳ: ಹಜರತ್​ ರಾಜಾಬಾಗ್​ ಸವಾರ್​ ದರ್ಗಾದಿಂದ ನಿರ್ಮಿಸುತ್ತಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಸಂಸದರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡುವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಭರವಸೆ ನಿಡಿದರು.

ನಗರದ ದರ್ಗಾ ಆವರಣದಲ್ಲಿ ಶುಕ್ರವಾರ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಅಭಿವೃದ್ಧಿಪರ ಕೆಲಸಗಳಿಗೆ ನನ್ನ ಬೆಂಬಲ ಇರಲಿದೆ. ಆಸ್ಪತ್ರೆ ನಿರ್ಮಾಣದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದೊಂದು ಉತ್ತಮ ಕಾರ್ಯ ಎಂದರು.

ರಾಜ್ಯ ವಕೀಲರ ಪರಿಷತ್​ ಸದಸ್ಯ, ಹಿರಿಯ ವಕೀಲ ಆಸ್​ೀ ಅಲಿ ಮಾತನಾಡಿ, ದರ್ಗಾ ಕಮಿಟಿ ಪದಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಪರ ಕೆಲಸ ಮಾಡುತ್ತಿರುವುದು ಶ್ಲಾನೀಯ. ಅವಧಿ ಮುಗಿದರು ಉತ್ತಮ ಕೆಲಸ ಮಾಡಲು ಮುಂದಾಗಿದ್ದು, ಇದಕ್ಕೆ ಸಮುದಾಯದವರ ಬೆಂಬಲ ಇರಲಿದೆ ಎಂದು ತಿಳಿಸಿದರು.

ಸಾನ್ನಿಧ್ಯವಹಿಸಿದ್ದ ಮುಸ್ಲಿಮ್​ ಧರ್ಮಗುರು ಖತೀಬ್​ ಇಮಾಮ್​ ಮೌಲಾನ ಮುಫ್ತಿ ಮೊಹಮ್ಮದ್​ ನಜೀರ್​ ಅಹಮದ್​ ಖಾದ್ರಿ ತಸ್ಕಿನಿ ಮಾತನಾಡಿ, ಸಮಾಜದ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಸಂಘ ಸಂಸ್ಥೆಗಳು ಜನ ಪ್ರತಿನಿಧಿಗಳು ಶ್ರಮಿಸಬೇಕು. ಉತ್ತಮ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿವೆಂದರು.

ದರ್ಗಾ ಕಮಿಟಿ ಅಧ್ಯಕ್ಷ ಮೌಲಾ ಹುಸೇನ್​ ಜಮೆದಾರ, ನ್ಯಾಯವಾದಿ ಅಬ್ದುಲ್​ ಅಜಿಜ್​ ಚೌಥಾಯಿ, ನಿವೃತ್ತ ಉಪ ತಹಸೀಲ್ದಾರ್​ ಲಾಯಕ್​ ಅಲಿ, ಪ್ರಮುಖರಾದ ಇಬ್ರಾಹಿಂ ಸಾಬ್​ ಅಡ್ಡೇವಾಲೆ, ಪೀರಾಹುಸೇನ್​ ಹೊಸಳ್ಳಿ, ಹುಸೇನ್​ ಪೀರ, ಮಾನ್ವಿ ಪಾಷಾ, ನಗರಸಭೆ ಸದಸದ್ಯರಾದ ಅಕ್ಬರ್​ ಪಾಷಾ ಪಲ್ಟನ್​, ಅಜೀಮ್​ ಅತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net