ಹೆಬ್ಬಾವು ಹಿಡಿದ ಸ್ನೇಕ್ ಶಿವು

Hebbavu
Published on

ಚಿತ್ರದುರ್ಗ: ನಗರದ ಬಿ.ಡಿ.ರಸ್ತೆಯ ಬೇಕರಿಯೊಂದರ ಪಕ್ಕ ಗುರುವಾರ ಬೆಳಗ್ಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವ ವೇಳೆ ಪೌರ ಕಾರ್ಮಿಕರಿಗೆ ಹೆಬ್ಬಾವು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಸ್ನೇಕ್ ಶಿವು ಅವರಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಶಿವು ಹೆಬ್ಬಾವನ್ನು ಹಿಡಿದು ಜೋಗಿಮಟ್ಟಿ ವನ್ಯಧಾಮಕ್ಕೆ ಬಿಟ್ಟು ಬಂದಿದ್ದಾರೆ. ಈಚೆಗೆ ಸುರಿದ ಮಳೆಯ ನೀರಿನೊಂದಿಗೆ ಹರಿದುಕೊಂಡು ಬಂದು ಇಲ್ಲಿ ಸೇರಿಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net