

ಕುಶಾಲನಗರ: ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅರುಣಕುಮಾರಿ ಮತ್ತು ಉಪಾಧ್ಯಕ್ಷರಾಗಿ ಲತಾ ಆಯ್ಕೆಯಾಗಿದ್ದಾರೆ.
ಬಿಸಿಎಂ(ಎ) ಮಹಿಳಾ ವಿಭಾಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅರುಣಕುಮಾರಿ ಮತ್ತು ರತ್ನಮ್ಮ ಸ್ಪರ್ಧಿಸಿದ್ದರು. ಪರಿಶಿಷ್ಟ ಜಾತಿ ವಿಭಾಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಾರಾಯಣ ಮತ್ತು ಲತಾ ಸ್ಪರ್ಧಿಸಿದ್ದರು.
ಬಳಿಕ ಮತದಾನ ನಡೆದು ಅರುಣಕುಮಾರಿ 7 ಮತ ಪಡೆದು ತಮ್ಮ ಪ್ರತಿಸ್ಪರ್ಧಿ ರತ್ನಮ್ಮ(5 ಮತ) ಅವರನ್ನು ಸೋಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲತಾ 7 ಮತ ಪಡೆದು ನಾರಾಯಣ(5 ಮತ) ಅವರನ್ನು ಮಣಿಸಿದರು.
ಗ್ರಾಪಂನ ಒಟ್ಟು 14 ಸದಸ್ಯರ ಪೈಕಿ ಒಬ್ಬ ಸದಸ್ಯೆ ಚುನಾವಣೆಗೆ ಗೈರಾಗಿದ್ದರು. ಒಟ್ಟು 13 ಮತಗಳಲ್ಲಿ ಒಂದು ಮತ ತಿರಸ್ಕೃತಗೊಂಡಿತು. ಚುನಾವಣಾಧಿಕಾರಿಯಾಗಿ ಕುಶಾಲನಗರ ತಾಲೂಕು ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಭಾಸ್ಕರ್ ಕಾರ್ಯನಿರ್ವಹಿಸಿದರು.
ಸದಸ್ಯರಾದ ಮಂಜುನಾಥ, ಶಿವನಂಜಪ್ಪ, ನಾರಾಯಣ, ಚಂದ್ರಶೇಖರ್ ಜೋಗಿ, ತನುಕುಮಾರ್, ರತ್ನಮ್ಮ, ಪರಮೇಶ್, ಮಹದೇವ, ಪುಟ್ಟಲಕ್ಷ್ಮೀ,ಕವಿತಾ, ಲತಾ, ಯಶಸ್ವಿನಿ, ಗ್ರಾಮದ ಪ್ರಮುಖರಾದ ರಾಜಶೇಖರ್, ಜಗದೀಶ್, ಸತೀಶ್, ಪ್ರದೀಪ್ ರೆಡ್ಡಿ, ಬಸವಣ್ಣ, ರಮೇಶ್, ಮಹೇಶ್, ಲೋಕೇಶ್, ಎಚ್.ಆರ್.ರವಿ, ಕುಶಾಲನಗರ ಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಮೋಹನ ಮತ್ತು ಹಿರಿಯ ಮುಖಂಡರು ಹಾಜರಿದ್ದರು.