

ಚಾಮರಾಜನಗರ: ಅಸ್ಪೃಶ್ಯತೆ ಮತ್ತು ದೌರ್ಜನ್ಯ, ನಿಂದನೆ ಕಾನೂನು ಪ್ರಕಾರ ಅಪರಾಧ ಎಂದು ಕಲಾವೇದಿಕೆ ಅಧ್ಯಕ್ಷ ಎಸ್.ಶಾಂತರಾಜು ಹೇಳಿದರು.
ತಾಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ರಂಗ ದೇಗುಲ ಕಲಾವೇದಿಕೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ದೌರ್ಜನ್ಯ ಪ್ರತಿಬಂಧ ಹಾಗೂ ಅಸ್ಪೃಶ್ಯತಾ ನಿರ್ಮೂಲನ ಜನ ಜಾಗೃತಿ ಬೀದಿ ನಾಟಕ ಪ್ರದರ್ಶನದಲ್ಲಿ ಮಾತನಾಡಿ, ಗ್ರಾಮದಲ್ಲಿರುವ ಎಲ್ಲ ಜನಾಂಗದವರು ಸಹೋದರರಂತೆ ಬದುಕಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಹೆಬ್ಬಸೂರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ನಡೆದ ಬೀದಿ ನಾಟಕ ಪ್ರದರ್ಶನಕ್ಕೆ ಗ್ರಾಮಸ್ಥರಿಂದ ಉತ್ತಮ ಸಹಕಾರ ಮತ್ತು ಮೆಚ್ಚುಗೆ ವ್ಯಕ್ತವಾಯಿತು. ಗ್ರಾಪಂ ಕಂದಾಯ ವಸೂಲಿಗಾರ ನಂದೀಶ್, ಗ್ರಂಥಾಲಯ ಮೇಲ್ವಿಚಾರಕ ಸುರೇಶ್, ಬಿ.ಸಿದ್ದರಾಜು, ಮಹದೇವಪ್ರಭು, ಗೀತಾ, ಮಹೇಶ್, ಸುರೇಶ್ ಕೋಳಿಪಾಳ್ಯ, ಗುರುರಾಜು ತಮ್ಮಡಹಳ್ಳಿ, ಡಿ.ಎನ್.ಹೇಮಾ ಇತರರು ಹಾಜರಿದ್ದರು.