

ಬೆಳಗಾವಿ: ಹೆಪಟೈಟಿಸ್ ಬಿ ದೀರ್ಕಾಲದ ಲಿವರ್ ವ್ಯಾಧಿಗಳಿಗೆ ಹಾಗೂ ಹಿಪ್ಯಾಟೋ ಸೆಲ್ಯೂಲಾರ್ ಕಾರ್ಸಿನೋಮಾಗೆ ಪ್ರಮುಖ ಕಾರಣವಾಗಿದ್ದು, ಹೆಪಟೈಟಿಸ್ ಬಿ ವ್ಯಾಕ್ಸಿನ್ ತೆಗೆದುಕೊಂಡರೆ ಅದರಿಂದ ರಣೆ ಪಡೆಯಬಹುದು ಎಂದು ಹಿರಿಯ ಗ್ಯಾಸ್ಟ್ರೊಎಂಟ್ರಾಲಾಜಿಸ್ಟ್ ಡಾ.ಸಂತೋಷ ಹಜಾರೆ ಹೇಳಿದರು.
ನಗರದ ಕೆಎಲ್ಇ ಸಂಸ್ಥೆ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕಿಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೊಎಂಟರಾಲಜಿ ಮತ್ತು ಲಿವರ್ ವಿಭಾಗವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈಚೆಗೆ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗಾಗಿ ಏರ್ಪಡಿಸಿದ್ದ ಲಿವರ್ ತಪಾಸಣಾ ಶಿಬಿರ ಹಾಗೂ ಜಾಗೃತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಪಟೈಟಿಸ್ ಬಿ ದೀರ್ಕಾಲದ ಲಿವರ್ ವ್ಯಾಧಿಗಳಿಗೆ ಕಾರಣವಾಗಿದ್ದು, ಸುಮಾರು ಶೇ. 90ರಷ್ಟು ಸೋಂಕು ಹೊಂದಿದ ಗರ್ಭಿಣಿಯಿಂದ ನವಜಾತ ಶಿಶುವಿಗೆ ಹರಡುತ್ತದೆ. ಶೇ.10ರಷ್ಟು ಸ್ಟರಿಲೈಸ್ಡ್ ಇಲ್ಲದ ಚುಚ್ಚುಮದ್ದು, ಟ್ಯಾಟೂ, ಅಕ್ಯೂಪಂಚರ್ ಸೂಜಿ, ತಪಾಸಣೆಗೊಳ್ಪಡಿಸಿದ ರಕ್ತ ಬಳಸುವುದರಿಂದ ಹಾಗೂ ಅಸುರತ ಲೈಂಗಿಕತೆಯಿಂದ ಹರಡುತ್ತದೆ. ಈ ಸೋಂಕಿನಿಂದ ಹೆಚ್ಬಿಎಸ್ಎಜಿ ರಕ್ತದಲ್ಲಿ ಕಂಡುಬರುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲ. ವ್ಯಾಕ್ಸಿನ್ ತೆಗೆದುಕೊಳ್ಳುವುದರಿಂದ ಇದರಿಂದ ರಣೆ ಪಡೆಯಬಹುದು ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಕರ್ನಲ್ ದಯಾನಂದ ಮಾತನಾಡಿ, 15 ವರ್ಷಗಳಿಂದ ಉತ್ತರ ಕರ್ನಾಟಕದ್ಯಾಂತ ಹೆಪಾಟೈಟಿಸ್ ಬಿ ಮತ್ತು ಸಿ ತಪಾಸಣಾ ಶಿಬಿರಗಳ ಮೂಲಕ ಸಾಮಾಜಿಕ ಸೇವೆ ಮಾಡಲಾಗುತ್ತಿದೆ. ವಿಶೇಷವಾಗಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ಜಿಲ್ಲಾ ಯರೋಗ ನಿಯಂತ್ರಣಾಧಿಕಾರಿ ಡಾ. ಚಾಂದನಿ ಮಾತನಾಡಿದರು. ಡಾ. ಸಂತೋಷ ಬಳ್ಳಾರಿ, ಡಾ.ಗೀತಾ ದೇಸಾಯಿ, ಡಾ.ಉಜ್ವಲ ನಿಶಾಂತ್ ಇತರರಿದ್ದರು.