ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್
Published on

ಹಾಸನ: ವೀಕೆಂಡ್ ರಜಾ ಮುಗಿದ ಹಿನ್ನಲೆ, ಸೋಮವಾರದಿಂದ ಶಾಲೆಗಳು ಆರಂಭವಾಗುವುದಿರಿಂದ ಜನರು ತಮ್ಮ ತಮ್ಮ ಊರುಗಳಿಗೆ ಹೊರಟಿದ್ದರಿಂದ ನಗರದ ಚನ್ನಪಟ್ಟಣ ವೃತ್ತದ ಮೂಲಕ ಹಾದುಹೋಗಿರುವ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿಯಿತು.
ನಗರದ ಚನ್ನಪಟ್ಟಣ ಬೈಪಾಸ್‌ನಲ್ಲಿ ಭಾನುವಾರ ಸಂಜೆ ಒಮ್ಮೆಗೆ ನೂರಾರು ವಾಹನಗಳು ಸಂಚಾರ ನಡೆಸಿದ್ದರಿಂದ ಕಿಲೋಮೀಟರ್‌ಗಟ್ಟಲೆ ವಾಹನ ದಟ್ಟಣೆ ಉಂಟಾಗಿತು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರ ಪರದಾಟ ನಡೆಸಿದರೆ, ವಾಹನಗಳ ಸಂಚಾರವನ್ನು ಸುಗಮಗೊಳಿಸಲು ಸಂಚಾರಿ ಪೊಲೀಸರ ಹರಸಾಹಸ ಪಟ್ಟರು.
ನಗರದಿಂದ ಮೈಸೂರು ಮಾರ್ಗ, ಬೆಂಗಳೂರು, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚನ್ನಪಟ್ಟಣ ಬೈಪಾಸ್ ವೃತ್ತದಲ್ಲಿ ಮೂರು ಕಡೆಗಳಿಂದಲೂ ನೂರಾರು ವಾಹನಗಳು ನಿಂತಿದ್ದರಿಂದ ವಾಹನಗಳ ಸಾಲು ಕಿಲೋಮೀಟರ್‌ಗಟ್ಟಲೆ ತಲುಪಿತ್ತು. ವಾಹನ ದಟ್ಟಣೆ ಕಂದಲಿಯಿಂದಲೂ ಇದ್ದರಿಂದ ವಾಹನ ಸವಾರರು, ಪ್ರಯಾಣಿಕರು ಗಂಟೆಗಟ್ಟಲೇ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಯಿತು.
ಬೇಸಿಕೆಗೆ ಮುಕ್ತಾಯಗೊಂಡು ಸೋಮವಾರದಿಂದ ಶಾಲೆಗಳು ಆರಂಭವಾಗುವುದರಿಂದ ಮಂಗಳೂರಿಗೆ, ಬೆಂಗಳೂರಿಗೆ ತೆರಳುವವರ ಸಂಖ್ಯೆಯೂ ಹೆಚ್ಚಾಗಿತ್ತು. ಅಲ್ಲದೇ ಬೆಂಗಳೂರು ಭಾಗದ ಪ್ರವಾಸಿಗರು ಸಕಲೇಶಪುರ, ಬೇಲೂರು, ಹಳೇಬೀಡು ಭಾಗಕ್ಕೆ ಆಗಮಿಸಿದ್ದು, ಪ್ರವಾಸ ಮುಗಿಸಿಕೊಂಡು ತಮ್ಮ ತಮ್ಮ ಊರುಗಳಿಗೆ ಸಂಜೆ ವೇಳೆ ಹೊರಟಿದ್ದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟನೆ ಅಧಿಕವಾಗಿತ್ತು.
ನಗರದ ಮಾತ್ರವಲ್ಲದೇ ಸಕಲೇಶಪುರ ಪಟ್ಟಣ, ಬೇಲೂರು ಪಟ್ಟಣದಲ್ಲೂ ಟ್ರಾಫಿಕ್ ಸಮಸ್ಯೆಯನ್ನು ಜನರು ಎದುರಿಸಬೇಕಾಯಿತು. ಪಾದಚಾರಿಗಳು ರಸ್ತೆ ದಾಟಲೂ ಪರಡಾಟ ನಡೆಸಬೇಕಾದ ಸ್ಥಿತಿ ಉಂಟಾಯಿತು. ನಗರ ಹೊರವಲಯದ ಈಚನಹಳ್ಳಿ ಬಳಿ ಭಾನುವಾರ ಬೆಳಂಬೆಳಿಗ್ಗೆ ಭೀಕರ ಅಪಘಾತ ಅಂಭವಿಸಿದ್ದರಿಂದ ಬೆಳಿಗ್ಗೆಯಿಂದಲೂ ಜನರು ಟ್ರಾಫಿಕ್ ಸಮಸ್ಯೆಯಿಂದ ಹೊರಬರಲಾಗದೆ ಕಿರಿಕಿರಿ ಅನುಭವಿಸಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net