ಹೆದ್ದಸೆಯಲ್ಲಿ ಸತಿಗಲ್ಲು ವಿಗ್ರಹ ಪತ್ತೆ

24jyp2 web
Published on

ಜಯಪುರ: ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಸೆ ಕಾಡಿನ ಹಾಡ್ಯದಲ್ಲಿ 15-16ನೇ ಶತಮಾನದ ಭಗ್ನಗೊಂಡಿರುವ ಸತಿಗಲ್ಲು ಮತ್ತು ಸ್ತ್ರೀ ವಿಗ್ರಹ ಪತ್ತೆಯಾಗಿದೆ. ವಿಗ್ರಹವು 15 ಸೆಂಟಿಮೀಟಿರ್ ಎತ್ತರವಾಗಿದ್ದು ಜಗದೀಶ್ ಎಂಬುವವರು ಹೊಲದ ಕೆಲಸ ಮಾಡುವ ಸಂದರ್ಭದಲ್ಲಿ ಸಿಕ್ಕಿದೆ ಎಂದು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ತಿಳಿಸಿದ್ದಾರೆ. ಸತಿಗಲ್ಲು 45 ಸೆಂ.ಮೀ. ಉದ್ದ ಮತ್ತು ಅಗಲವಾಗಿದ್ದು ಎರಡೂ ಕೈಯಲ್ಲಿ ಆಯುಧ ಹಿಡಿದಿರುವಂತೆ ಕೆತ್ತಲಾಗಿದೆ. ಕಿರೀಟಧಾರಿಯಾಗಿರುವ ಇನ್ನೊಂದು ಸ್ತ್ರೀ ಶಿಲ್ಪವು ಸಮಭಂಗಿಯಲ್ಲಿ ನಿಂತಿದ್ದು ವಿಗ್ರಹದ ಕೈಗಳು, ಮುಖದ ಭಾಗ ಭಗ್ನಗೊಂಡಿದೆ. ಸತಿಕಲ್ಲು ಪತ್ತೆ ಕಾರ್ಯದಲ್ಲಿ ಹೆದ್ದಸೆಯ ಉದಯ, ಸತೀಶ್, ದಿನೇಶ್ ಮತ್ತು ಶರತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net