ಹೆತ್ತವರ ಪೂಜಿಸುವ ಸಂಸ್ಕೃತಿ ಭಾರತದಲ್ಲಿ ಮಾತ್ರ: ಚನ್ನಬಸವ ದೇವರು ಆಶೀರ್ವಚನ

Oplus_19006464
Oplus_19006464
Published on

ಹಿರೇಬಾಗೇವಾಡಿ: ತಂದೆ-ತಾಯಿಗಳನ್ನು ದೇವರೆಂದು ಪೂಜಿಸುವ ಸಂಸ್ಕೃತಿ ಭವ್ಯ ಭಾರತದಲ್ಲಿ ಮಾತ್ರ ಇದೆ ಎಂದು ಅವರೊಳ್ಳಿ ರುದ್ರಸ್ವಾಮಿಮಠದ ಚನ್ನಬಸವ ದೇವರು ಹೇಳಿದರು.

ಇಲ್ಲಿಯ ಶ್ರೀ ಸಾಯಿಬಾಬಾ ಮಂದಿರ ಉದ್ಘಾಟನೆಯ ಒಂದು ವರ್ಷದ ವರ್ಷಾಚರಣೆ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಸತ್ಸಂಗ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಹವಣಿಕೆಯಲ್ಲಿ ಅವರನ್ನು ಕೇವಲ ಓದುವ ಯಂತ್ರವನ್ನಾಗಿಸಬೇಡಿ. ವಿವೇಕವುಳ್ಳವರನ್ನಾಗಿಸಿ ಒಳೆಯ ಸಂಸ್ಕಾರ ನೀಡಬೇಕು. ತಂದೆ&ತಾಯಿ, ಗುರುಗಳನ್ನು ಗೌರವದಿಂದ ಕಾಣುವ ಪರಿಪಾಠ ಬೆಳೆಯಬೇಕು ಎಂದರು.

ಜಾಲಿ ಕರೆಮ್ಮ ದೇವಸ್ಥಾನದ ಉಳವಪ್ಪಜ್ಜ ಸಾನ್ನಿಧ್ಯ ವಹಿಸಿದ್ದರು. ಸಾಯಿ ಸೇವಾ ಸಮಿತಿ ಅಧ್ಯ ಡಾ ಎಫ್​.ಎಸ್​. ಪಾಟೀಲ ಅಧ್ಯತೆ ವಹಿಸಿದ್ದರು. ಗ್ರಾಪಂ ಅಧ್ಯೆ ಜಯಶ್ರೀ ಜಪ್ತಿ, ಉಪಾಧ್ಯೆ ಶ್ರುತಿ ಸಿದ್ದನವರ, ಶ್ರೀಕಾಂತ ಮಾದುಭರಮಣ್ಣವರ, ರೇಣುಕಾ ಪಾಟೀಲ, ಶಶಿಧರ ರೊಟ್ಟಿ, ಅನಿಲ ಪಾಟೀಲ, ಎಸ್​.ಎಸ್​. ಅರಳೀಕಟ್ಟಿ, ಶೆಲಾ ಕಡೇಮನಿ, ಶಿವಾನಂದ ಹಿತ್ತಲಮನಿ ಇತರರು ಇದ್ದರು. ಕನ್ನಡ ಹೆಣ್ಣು ಮಕ್ಕಳ ಶಾಲಾ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು. ಮಹಾಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net