

ಯಾದಗಿರಿ: ತಾನು ಸಾಧನೆ ಮಾಡಿ ಹೆತ್ತಮ್ಮಳನ್ನು ಸಾಧಕರ ಸಾಲಿನಲ್ಲಿ ಕೂಡಿಸಿ ಗಣ್ಯರಿಂದ ಸನ್ಮಾನಿಸಿ ಅಪಾರ ಸಂತೋಷಪಟ್ಟ ಮಗನೊಬ್ಬರ ಈ ಕಾರ್ಯ ಅಲ್ಲಿ ಸೇರಿದ ಎಲ್ಲರನ್ನು ಭಾವುಕರಾಗುವಂತೆ ಮಾಡಿದ ಪ್ರಸಂಗ ಸೋಮವಾರ ಇಲ್ಲಿನ ಆರ್ಯಭಟ್ಟ ಪಿಯು ಕಾಲೇಜಿನಲ್ಲಿ ಜರುಗಿತು.
ನೀಟ್ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ಲಿಂಗೇಶ್ ಹಣಮಂತ ಬಾಡರ್ ಎಂಬ ವಿದ್ಯಾರ್ಥಿಯೇ ತನ್ನ ತಾಯಿ ಬಸಮ್ಮಳನ್ನು ತನಗೆ ಮೀಸಲಿಟ್ಟ ಸನ್ಮಾನದ ಕುರ್ಚಿ ಮೇಲೆ ತಾಯಿಯನ್ನು ಕೂಡಿಸಿ ಶಾಸಕ, ಗಣ್ಯರಿಂದ ಸನ್ಮಾನಿಸುವ ಮೂಲಕ ಹೆತ್ತವರಿಗೆ ಪೂಜ್ಯನೀಯ ಸ್ಥಾನ ನೀಡಿ ಸಂಸ್ಕಾರ ಮೆರೆದಿದ್ದಾನೆ.
ಸೋಮವಾರ ಸನ್ಮಾನ ಕಾರ್ಯಕ್ರಮ ಆರಂಭವಾಗುತ್ತಿದ್ದAತೆ ತನ್ನ ತಾಯಿಯನ್ನು ವೇದಿಕೆಗೆ ಕರೆ ತಂದ ಲಿಂಗೇಶ್, ತಾಯಿ ಪರಿ, ಪರಿಯಾಗಿ ಬೇಡ ಎಂದರೂ ತಾನು ಕೂಡಬೇಕಾಗಿದ್ದ ಕುರ್ಚಿ ಮೇಲೆ ಆಕೆಯನ್ನು ಕೂಡಿಸಿ ಕಾಲುಮುಟ್ಟಿ ನಮ್ಮಸ್ಕರಿದ ಇತನ ಕಾರ್ಯ ವೈಖರಿ ಗಮನಿಸಿದ ಅತಿಥಿಗಳು, ಸಭಿಕರು ಕೆಲ ಕ್ಷಣ ಭಾವುಕರಾಗಿ ಕಣ್ಣಲ್ಲಿ ನೀರು ತಂದರು. ಚಪ್ಪಾಳೆಗಳ ಸುರಿಮಳೆ ಸುರಿದವು. ಹುಟ್ಟಿದರೆ ಇಂತಹ ಮಕ್ಕಳು ಹುಟ್ಟಬೇಕು ಎಂಬ ಮಾತುಗಳು ಸಹ ಕೇಳಿ ಬಂದವು.
ಹಲವು ವಿಶೇಷತೆಗಳ ಲಿಂಗೇಶ್: ಈತನದು ಹಲವು ವಿಶೇಷತೆಗಳಿಂದ ಕೂಡಿದ ಜೀವನ ಹಾಗೂ ಸಾಧನೆ ಇದೆ. ಕೇವಲ ಒಂದು ತಿಂಗಳಿನ ಶಿಶು ಇರುವಾಗಲೇ ಹೃದಯದಲ್ಲಿ ಕಾಣಿಸಿಕೊಂಡ ರಂದ್ರದಿAದಾಗಿ ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ಶಸ್ತç ಚಿಕಿತ್ಸೆ ಮಾಡಿಸಿಕೊಂಡು ಮರು ಜೀವ ಪಡೆದಿದ್ದಾನೆ. ಮುಂದೆ ನಗರದ ಎಂಆರ್‌ಎA ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಪ್ರವೇಶ ಪಡೆದು ಎಸ್ಸೆಸ್ಸೆಲ್ಸಿಯಲ್ಲಿ ಶೇ.೮೨ ಅಂಕ ಪಡೆದಿದ್ದಾನೆ. ಅಲ್ಲದೆ ದ್ವಿತೀಯ ಪಿಯುನಲ್ಲಿ ಶೇ.೯೨ ಅಂಕ ಪಡೆದಿರುವ ಈತ ಈಗ ಆರ್ಯಭಟ್ಟ ಕಾಲೇಜಿನಲ್ಲಿ ವರ್ಷಗಳ ಕಾಲ ನೀಟ್ ಪರೀಕ್ಷೆಗಾಗಿ ತರಬೇತಿ ಪಡೆದು ಶೇ.೯೧.೧೩ಫಲಿತಾಂಶ ತನ್ನದಾಗಿಸಿಕೊಂಡು ಮೆಡಿಕಲ್ ಓದಲು ಸಜ್ಜಾಗಿದ್ದು ಗಿರಿಜಿಲ್ಲೆಯ ಕೀರ್ತಿ ಇಮ್ಮಡಿಗೊಳಿಸಿದ್ದಾನೆ.
ಕೂಲಿ ಕೆಲಸ ಮಾಡಿ ಮಕ್ಕಳಿಗೆ ಶಿಕ್ಷಣ: ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದವರಾದ ಬಸಮ್ಮ ಹಣಮಂತ ಬಾಡರ್, ಕಳೆದ ೨೦ವರ್ಷದ ಹಿಂದೆ ಮಕ್ಕಳ ಶಿಕ್ಷಣಕ್ಕಾಗಿ ಯಾದಗಿರಿಗೆ ಬಂದು ನೆಲೆಸಿದ್ದಾರೆ. ಈ ದಂಪತಿಗೆ ಐವರು ಮಕ್ಕಳು, ಮೂವರು ಪುತ್ರರರು, ಇಬ್ಬರು ಪುತ್ರಿಯರು. ದೊಡ್ಡವರಲ್ಲಿ ಒಬ್ಬ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೇ, ಇನ್ನೊಬ್ಬ ನಗರದಲ್ಲಿಯೇ ಗಾರೆ ಕೆಲಸ ಮತ್ತು ಒಬ್ಬ ಮಗಳು ಆಸ್ಪತ್ರೆಯಲ್ಲಿ ನರ್ಸ್ ಸೇವೆ ಸಲ್ಲಿಸುತ್ತಿದ್ದಾಳೆ. ಇನ್ನೊಬ್ಬ ಮಗಳಿಗೆ ಮದುವೆ ಮಾಡಿಕೊಟ್ಟಿರುವ ಈ ಕುಟುಂಬ ಕೊನೆಯ ಕುಡಿಯೇ ಈ ಸಾಧಕ ಲಿಂಗೇಶ್. ತಂದೆ-ತಾಯಿ ಇಬ್ಬರು ಹೊಲದಲ್ಲಿ ಕೂಲಿ ಕೆಲಸ ಮಾಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ.