ಹೆಣ್ಣೆಂಬ ತಾತ್ಸಾರ ಸಲ್ಲ

kpp girls
ಹಿರೇಕೊಡಿಗೆ ಗ್ರಾಪಂ ಲಾಲ್ ಬಹಾದೂರ್ ಶಾಸ್ತ್ರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಜೆಎಂಎಫ್‌ಸಿ ನ್ಯಾಯಾಧೀಶೆ ಎಂ.ಎನ್.ನಂದಿನಿ ಮಾತನಾಡಿದರು. ನಾರಾಯಣಸ್ವಾಮಿ, ಸತೀಶ್, ರಾಜೇಶ್, ಕೆ.ಎಸ್.ಅಣ್ಣಯ್ಯ ಇತರರಿದ್ದರು.
Published on

ಕೊಪ್ಪ: ಹೆಣ್ಣು ಮಕ್ಕಳೆಂದು ತಾತ್ಸಾರ ಮನೋಭಾವನೆ ಸಲ್ಲ ಎಂದು ಜೆಎಂಎಫ್‌ಸಿ ನ್ಯಾಯಾಧೀಶೆ ಎಂ.ಎನ್.ನಂದಿನಿ ತಿಳಿಸಿದರು.

ಹಿರೇಕೊಡಿಗೆ ಗ್ರಾಪಂ ಲಾಲ್ ಬಹಾದೂರ್ ಶಾಸ್ತ್ರಿ ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.

ಭಾರತ ಪುರುಷ ಪ್ರಧಾನ ರಾಷ್ಟ್ರ ಎಂದು ಕರೆಯಲಾಗುತ್ತಿತ್ತು. ನಾನು ಹುಟ್ಟಿದಾಗ ಹೆಣ್ಣು ಮಗುವೆಂದು ನನ್ನ ಕುಟುಂಬದಲ್ಲೂ ಕಡೆಗಣಿಸಿದ್ದರು. ನಾನು ಓದಿ ನ್ಯಾಯಾಧೀಶೆಯಾದೆ. ವಿದ್ಯಾರ್ಥಿನಿಯರು ಯಾವುದಾದರೂ ಕ್ಷೇತ್ರದಲ್ಲಿ ಸಾಧಕರಾಗಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಾಧನೆಯ ಹಾದಿಯಲ್ಲಿ ಇದ್ದಾರೆ. ಪುರುಷನಿಗೆ ಸರಿ ಸಮಾನವಾಗಿ ನಿಲ್ಲಬಲ್ಲಳು. ಹೆಣ್ಣು ಮಕ್ಕಳು ಹದಿಹರೆಯದಲ್ಲಿ ಯಾರದ್ದೋ ಮಾತಿಗೆ ಮರುಳಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂದು ತಿಳಿಸಿದರು.

ವಕೀಲ ನಾರಾಯಣಸ್ವಾಮಿ, ಪ್ರಾಢಶಾಲೆ ಮುಖ್ಯಶಿಕ್ಷಕ ಸತೀಶ್, ಬಿಜಿಎಸ್ ಅಕ್ಷರ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಾಜೇಶ್, ಶಾಲಾ ಸಂಯೋಜಕ ಕೆ.ಎಸ್.ಅಣ್ಣಯ್ಯ, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net