ಹೆಣ್ಣುಮಕ್ಕಳು ಸ್ವಂತ ಹಾದಿಯಲ್ಲಿ ಸಾಗಬೇಕು

10 ckm 2
ಚಿಕ್ಕಮಗಳೂರಿನ ಸಂತ ಜೋಸೆಫರ ಬಾಲಕರ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ರಾಷ್ಟಿçÃಯ ಶಿಕ್ಷಕಿಯರ ಫೆಡರೇಶನ್, ಜಿಲ್ಲಾ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತೆಯ ಕುಟುಂಬ ಮತ್ತು ಕಲ್ಯಾಣ ಅಧಿಕಾರಿ ಡಾ. ಶಶಿಕಲಾ ಅವರನ್ನು ಗೌರವಿಸಲಾಯಿತು.
Published on

ಚಿಕ್ಕಮಗಳೂರು: ಬದುಕೆಂಬ ಜಟಕಬಂಡಿಯಲ್ಲಿ ಮತ್ತೊಬ್ಬರ ನೋಡಿ ಅವರನ್ನು ಅನುಸರಿಸುವುದಕ್ಕಿಂತ, ತಮ್ಮದೇ ಸ್ವಂತ ಹಾದಿಯಲ್ಲಿ ಸಾಗಿ ಬದುಕು ರೂಪಿಸಿಕೊಳ್ಳಲು ಹೆಣ್ಣುಮಕ್ಕಳು ಮುಂದಾಗಬೇಕು ಎಂದು ಜಿಲ್ಲಾಸ್ಪತೆಯ ಕುಟುಂಬ ಮತ್ತು ಕಲ್ಯಾಣ ಅಧಿಕಾರಿ ಡಾ. ಶಶಿಕಲಾ ತಿಳಿಸಿದರು.

ನಗರದ ಸಂತ ಜೋಸೆಫರ ಬಾಲಕರ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ರಾಷ್ಟಿçÃಯ ಶಿಕ್ಷಕಿಯರ ಫೆಡರೇಶನ್, ಜಿಲ್ಲಾ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆ ಅಂಗವಾಗಿ ಶೈಕ್ಷಣಿಕ ಕಾರ್ಯಗಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ನೇತ್ರದಾನ ನೋಂದಣಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸಾವಿತ್ರಿಬಾಯಿಪುಲೆ ದೇಶದ ಪ್ರಪ್ರಥಮ ಶಿಕ್ಷಕಿಯಾಗಿ ದಲಿತ, ಹಿಂದುಳಿದ ವರ್ಗದ ಮಹಿಳೆಯರಿಗೆ ಸಂಪೂರ್ಣ ಶಿಕ್ಷಣವನ್ನು ಒದಗಿಸಲು ಶ್ರಮಿಸಿದ ಮಹಾನೀಯರು. ಅನಾದಿ ಕಾಲದಲ್ಲಿ ಮಹಿಳೆಯರ ಶಕ್ತಿ, ಸ್ವಾತಂತ್ರö್ಯಕ್ಕಾಗಿ ಶಿಕ್ಷಣದ ಮೂಲಕ ಶ್ರಮಿಸಿದ ಕಾರಣ ಇಂದು ದೇಶದ ವಿವಿಧ ಕ್ಷೇತ್ರದಲ್ಲಿ ಮಹಿಳೆ ಛಾಪು ಮೂಡಿಸಲು ಸಾಧ್ಯವಾಗಿದೆ ಎಂದರು.

ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಿ.ಎಸ್.ಪುಷ್ಪಾವತಿ ಮಾತನಾಡಿ, ಸಾವಿತ್ರಿಬಾಯಿ ಪುಲೆ ಸ್ಮರಣಾರ್ಥ ಶಿಕ್ಷಕಿಯರಿಗೆ ಸನ್ಮಾನ ಹಾಗೂ ನೇತ್ರದಾನ ಶಿಬಿರ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಎಲ್ಲಾ ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.

ಸದುz್ದೆÃಶದ ದೃಷ್ಟಿಯಿಂದ ಮಹಿಳೆಯರು ಒಗ್ಗಟ್ಟಾಗಿ ಸಂಘಟನೆ ಪ್ರಾರಂಭಿಸಿz್ದÉÃವೆ. ಶಿಕ್ಷಕಿಯರ ಸಬಲೀಕರಣ ಅಥವಾ ಕಷ್ಟ-ಸುಖಗಳಿಗೆ ಸ್ಪಂದಿಸುವುದಕ್ಕೆ ಶಾಲಾ ಅವಧಿಯ ಬಳಿಕ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಪ್ರತಿ ಶಿಕ್ಷಕಿಯರು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಅಧ್ಯಕ್ಷೆ ಜ್ಯೋತಿ, ಜಿಲ್ಲಾ ಕಾರ್ಯದರ್ಶಿ ಶೀಲಾ, ಕೋಶಾಧ್ಯಕ್ಷೆ ರಾಣಿ, ಶಿಕ್ಷಕಿಯರಾದ ಸುಮಿತ್ರ, ರಾಧಾ, ರೇಖಾ, ಗುಲ್ಜಾರ್, ಮಮತಾ, ಕಮಲಾಕ್ಷಿ, ನಾಗರತ್ನ, ಶಿಲ್ಪ, ವನಜಾಕ್ಷಿ, ರಾಜಶ್ರೀ, ವೀಣಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net