ಹೆಣ್ಣು ಹುಲಿ ತನ್ನ ಮೂರು ಮರಿಗಳ ಜತೆ ದರ್ಶನ

IMG-20250206-WA0157
Published on
ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಗುರುವಾರ ಮೂರುಕರೆ ಹೆಣ್ಣು ಹುಲಿ ತನ್ನ ಮೂರು ಮರಿಗಳ ಜತೆ ದರ್ಶನ ನೀಡಿದೆ.
ಮಧ್ಯಾಹ್ನ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಸಫಾರಿ‌ ವಲಯದ ತಾವರಕಟ್ಟೆ ಬಳಿ ಮೂರುಕೆರೆ ಫೀಮೇಲ್ ಎಂದು ಕರೆಯಲಾಗುವ ಹೆಣ್ಣು ಹುಲಿ ತನ್ನ
ಮೂರು ಮರಿಗಳ ಜತೆ ಕಾಣಿಸಿಕೊಂಡಿದೆ. ಕಳೆದ ತಿಂಗಳು ಇದೇ ಪ್ರದೇಶದಲ್ಲಿ ಇದು ಮೊದಲಬಾರಿಗೆ ತನ್ನ ಮರಿಗಳ ಜತೆ ಕಾಣಿಸಿತ್ತು. ಈ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net