ಹೆಣ್ಣು ಮಕ್ಕಳು ಸಾಧನೆಗೆ ಮನಸ್ಸು ಮಾಡಲಿ

26-KGL-2
Published on

ಕೊಳ್ಳೇಗಾಲ: ಹೆಣ್ಣು ಮಗಳು ಮನಸ್ಸು ಮಾಡಿದರೆ ಯಾವ ಸಾಧನೆಯನ್ನಾದರೂ ಮಾಡಬಹುದು ಎಂದು ಮೈಸೂರು ಜಾದು ಕಲಾವಿದೆ ಸುಮಾ ರಾಜ್‌ಕುಮಾರ್ ಹೇಳಿದರು.

ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ವೀರಶೈವ ಮಹಿಳಾ ವೇದಿಕೆಯ ಅಕ್ಕನ ಬಳಗದ 23ನೇ ವಾರ್ಷಿಕೋತ್ಸವ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೆಣ್ಣು ಮಕ್ಕಳು ತಮ್ಮ ಆಸೆಗಳು ಹಾಗೂ ಕನಸುಗಳನ್ನು ಈಡೇರಿಸಿಕೊಳ್ಳಲು ಅವಕಾಶವಿದೆ. ಪ್ರಯತ್ನ ಮಾಡಬೇಕಷ್ಟೆ ಎಂದು ಕಿವಿ ಮಾತು ಹೇಳಿದರು.

ಸ್ತ್ರೀ ರೋಗ ತಜ್ಞೆ ಡಾ.ಸೋಮಪ್ರಭಾ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕುಟುಂಬ ಹಾಗೂ ಕೆಲಸದ ಒತ್ತಡದಿಂದ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಮಾನಸಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದರು.

ಅಕ್ಕನ ಬಳಗದ ಗೌರವಾಧ್ಯಕ್ಷೆ ಪರಿಮಳಾ ನಾಗಪ್ಪ ಮಾತನಾಡಿದರು. ನಂತರ ವೀರಶೈವ ಮಹಿಳಾ ವೇದಿಕೆಯ ಅಕ್ಕನ ಬಳಗದ ನೂತನ ಅಧ್ಯಕ್ಷರಾಗಿ ಸವಿತಾ ಲೋಕೇಶ್, ನಿಕಟ ಪೂರ್ವ ಅಧ್ಯಕ್ಷೆ ಅರುಣಾ ಕಾರ್ತಿಕ್, ಉಪಾಧ್ಯಕ್ಷರಾಗಿ ಜಗದಾಂಬಾ ಸದಾಶಿವಮೂರ್ತಿ, ಕಾರ್ಯದರ್ಶಿಯಾಗಿ ಶ್ವೇತಾ ಸ್ವಾಮಿ, ಸಹಕಾರ್ಯದರ್ಶಿಯಾಗಿ ನಾಗವೇಣಿ ನಾಗಣ್ಣ, ಖಂಜಾಚಿಯಾಗಿ ಚಂದನ ಪ್ರಕಾಶ್, ಸಂಚಾಲಕಿಯಾಗಿ ಪ್ರಮೀಳಾ ನಂಜಪ್ಪ, ಗೀತಾ ಮಂಜುನಾಥ್, ನಿರ್ದೇಶಕರಾಗಿ ನಾಗಮಣಿ ಮಲ್ಲಿಕಾರ್ಜುನ್, ಪಲ್ಲವಿ ಹರ್ಷ, ಸ್ಮಿತಾ ಸುರೇಶ್, ಮಮತಾ ಪ್ರಸಾದ್ ಪದಗ್ರಹಣ ಮಾಡಿದರು.

ಇದಕ್ಕೂ ಮುನ್ನ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಬಳಗದ ಕಾರ್ಯದರ್ಶಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ನಿಕಟ ಪೂರ್ವ ಅಧ್ಯಕ್ಷೆ ಅರುಣಾ ಕಾರ್ತಿಕ್, ನೂತನ ಅಧ್ಯಕ್ಷೆ ಸವಿತಾ ಲೋಕೇಶ್ ಹಾಗೂ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net