ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿ

bkt-3-3
ಬಾಗಲಕೋಟೆ ನಗರದ ಶಿವಾನಂದ ಜೀನ್‌ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜನುಮ ದಿನ ದಿನಾಚರಣೆ ಕಾರ್ಯಕ್ರಮ. ಮಾಜಿ ಶಾಸಕ ವೀರಣ್ಣ ಚರಂತಿಮಠ, ಡಾ.ಎಂ.ಎಸ್.ದಡ್ಡೇನವರ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಸಮೇದಾ ಮಾನೆ, ಡಾ.ವಿಜಯಲಕ್ಷ್ಮೀ ತುಂಗಳ, ಭಾಗ್ಯಾ ಹುದ್ನೂರ, ವೈಷ್ಣವೀ ಬಾಗೇವಾಡಿ ಇತರರು ಇದ್ದರು.
Published on

ಬಾಗಲಕೋಟೆ: ಅನಿಷ್ಟ ಪದ್ಧತಿಗಳ ವಿರುದ್ದ ಹೋರಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕಿದ್ದು, ಸಾವಿತ್ರಿ ಬಾಯಿ ಪುಲೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಸಮೇದಾ ಮಾನೆ ಹೇಳಿದರು.

ನಗರದ ಶಿವಾನಂದ ಜೀನ್‌ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜನುಮ ದಿನ ದಿನಾಚರಣೆ ಕಾರ್ಯಕರಮದಲ್ಲಿ ಅವರು ಮಾತನಾಡಿದರು.

ಅವರು ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸದ್ದ ಸಮಾಜಕ್ಕೆ ಎದುರಾಗಿ ನೋವು ಅಪಮಾನಗಳನ್ನು ಮೆಟ್ಟಿ ನಿಂತು, ಎಲ್ಲಾ ವರ್ಗಗಳ ಹೆಣ್ಣುಮಕ್ಕಳಿಗೆ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದ ದಿಟ್ಟ ಮಹಿಳೆ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ. ಇಂದು ಮಹಿಳಾ ವರ್ಗಕ್ಕೆ ಮಾದರಿಯಾಗಿದ್ದಾಳೆ ಎಂದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ, ಡಾ.ಎಂ.ಎಸ್.ದಡ್ಡೇನವರ, ರಾಜು ನಾಯ್ಕರ, ಸತ್ಯನಾರಾಯಣ ಹೆಮಾದ್ರಿ, ಡಾ.ವಿಜಯಲಕ್ಷ್ಮೀ ತುಂಗಳ, ಭಾಗ್ಯಾ ಹುದ್ನೂರ, ವೈಷ್ಣವೀ ಬಾಗೇವಾಡಿ, ಸುಜಾತಾ ಶಿಂಧೆ, ಭಾಗಿರತಿ ಪಾಟೀಲ, ಕಾವೇರಿ ರಾಥೋಡ. ಗೀತಾ ಸೂರ್ಯವಂಶಿ, ಶಶಿಕಲಾ ಮಜ್ಜಗಿ, ಪಾರ್ವತಿ ಹುಗ್ಗಿ, ಸಾವಿತ್ರಿ ಜೋಗುರ, ಶಿವಲೀಲಾ ಪಟ್ಟಣಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net