ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಕ್ರಮ

bkt-6-1
Published on

ಬಾಗಲಕೋಟೆ: ಪ್ರಸವ ಪೂರ್ವ ಲಿಂಗಪತ್ತೆ ಪರೀಕ್ಷೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹೆಣ್ಣು ಭ್ರೂಣಹತ್ಯೆ ತಡೆಗಟ್ಟುವ ಕಾರ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲಕುಮಾರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ಖಾಸಗಿ ಮೆಡಿಕಲ್ ಎಸ್ಟಾಬ್ಲಿಶಮೆಂಟ್ ಗರ್ಭಧಾರಣೆಯ ಪೂರ್ವ ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಗಳು ಕಾರ್ಯಕ್ರಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆಗಳನ್ನು ನಿಲ್ಲಿಸಲು ಮತ್ತು ದೇಶದಲ್ಲಿ ಕ್ಷೀಣಿಸುತ್ತಿರುವ ಲಿಂಗ ಅನುಪಾತವನ್ನು ಜಾರಿಗೆ ತಂದಂತಹ ಈ ಕಾಯ್ದೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯಾಗಬಾರದು. ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದರು.
ಲಿಂಗ್ ಪತ್ತೆ ಪರೀಕ್ಷೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ. ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸಬೇಕು. ಭ್ರೂಣ ಹತ್ಯೆ ಕುರಿತು ಎಲ್ಲಿಯೂ ದೂರುಗಳು ಬರುವದಿಲ್ಲವಾದ್ದರಿಂದ ವೈದ್ಯಾಽಕಾರಿಗಳು ಜಾಗೃತರಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.


ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಯಶ್ರೀ ಎಮ್ಮೆ ಸಭೆಗೆ ಮಾಹಿತಿ ನೀಡಿ, ಪಿಸಿ, ಪಿಎನ್‌ಡಿಟಿ ಕಾಯ್ದೆ ಅಡಿ ಜೆ ಎಂ ಎಫ್ ಸಿ ನ್ಯಾಯಾಲಯ ಬಾಗಲಕೋಟೆಯಲ್ಲಿ ಶ್ರದ್ಧಾ ಸ್ಕಾನಿಂಗ್ ಸೆಂಟರ್ ದಾಖಲಾತಿಗಳನ್ನು ನಿರ್ವಹಿಸದೇ ಇದ್ದುದ್ದರಿಂದ, ಇಳಕಲ್ಲನಲ್ಲಿ ಭ್ರೂಣ ಲಿಂಗ ಪತ್ತೆ ಮಾಡುತ್ತಿರುವ ಕುರಿತು, ಬೀಳಗಿ ಬಸವ ಪಾಲಿ ಕ್ಲಿನಿಕ್ ಡಾ. ಮೋಹನ ಚಟ್ಟೆರ ಹಾಗೂ ಬನಹಟ್ಟಿ ನ್ಯಾಯಾಲಯದಲ್ಲಿ ಕವಿತಾ ಬಾಡನ್ನವರ ವಿರುದ್ಧ ವಿದ್ಯಾರ್ಹತೆ ಇಲ್ಲದೆ ಯು ಎಸ್ ಜಿ ಯಂತ್ರ ನಿರ್ವಹಿಸಿದ ಕುರಿತು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದರು
ಸಭೆಯಲ್ಲಿ ಜಿ.ಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಽಕಾರಿ ಮಹಾದೇವ ಮುರಗಿ, ಜಿಲ್ಲಾ ಸರ್ಜನ್ ಡಾ. ಪ್ರಕಾರ ಬಿರಾದಾರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net