ಹೆಣ್ಣಿಗೂ ಗುಣಮಟ್ಟದ ಶಿಕ್ಷಣ ಕೊಡ್ಸಿ

klb4
ಮಿರಿಯಾಣದಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಪೋಷಣ ಅಭಿಯಾನದಲ್ಲಿ ಹೆಣ್ಣು ಮಕ್ಕಳ ಅಕ್ಷರಭ್ಯಾಸ ನಡೆಯಿತು. ನರಸಮ್ಮ ಅವಂಟಿ, ಕಸ್ತೂರಿಬಾಯಿ, ಅಶ್ವಿನಿ, ಲಲಿತಮ್ಮ ಇತರರಿದ್ದರು.
Published on

ಚಿಂಚೋಳಿ: ಇAದಿನ ಆಧುನಿಕ ಯುಗದಲ್ಲಿ ಪುರುಷರಷ್ಟೆ ಮಹಿಳೆಯರು ಸಬಲರಾಗಬೇಕು, ಹೆಣ್ಣೆಂಬ ತಾತ್ಸಾರ ಬಿಟ್ಟು, ಎಲ್ಲರಿಗೂ ಸಮಾನ ಶಿಕ್ಷಣ ನೀಡಬೇಕು ಎಂದು ಸ್ತಿçà ಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷೆ ನರಸಮ್ಮ ಅವಂಟಿ ಹೇಳಿದರು.

ಮಿರಿಯಾಣದ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಪೋಷಣ ಅಭಿಯಾನ ಉದ್ಘಾಟಿಸಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಮುಖರಾದ ಕಸ್ತೂರಿಬಾಯಿ, ಅಶ್ವಿನಿ, ಲಲಿತಮ್ಮ, ವೀರಯ್ಯ ಸ್ವಾಮಿ, ಬಸಯ್ಯ ಸ್ವಾಮಿ, ಅಂಜಲಯ್ಯಗೌಡ, ಶಾಂತಾ, ಜೈಶಂಕರ ಸೋಮಲಿಂಗದಳ್ಳಿ, ಶಾಂತಾಬಾಯಿ ಇತರರಿದ್ದರು.

ಚಿಮ್ಮನಚೋಡ, ಕೋಡ್ಲಿ ವಲಯದಲ್ಲೂ ಕಾರ್ಯಕ್ರಮ ಜರುಗಿದವು. ಗರ್ಭಿಣಿಯರಿಗೆ ಸೀಮಂತ, ಹೆಣ್ಣು ಮಕ್ಕಳ ಜನ್ಮದಿನ, ಅಕ್ಷರಭ್ಯಾಸ, ಅನ್ನಪ್ರಾಶನ ಸೇರಿ ಹಲವು ಕಾರ್ಯಕ್ರಮ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net