ಹೆಣ್ಣನ್ನು ಗೌರವಿಸಿದರೆ ಲಕ್ಷ್ಮೀ ಒಲಿಯುತ್ತಾಳೆ, ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಕಿವಿಮಾತು

A 9 CPTN 1
Published on

ಚನ್ನರಾಯಪಟ್ಟಣ: ಹೆಣ್ಣನ್ನು ಯಾರು ಗೌರವಿಸುತ್ತಾರೋ ಅವರಿಗೆ ಲಕ್ಷ್ಮೀ ಒಲಿಯುತ್ತಾಳೆ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯೆ, ಚಿತ್ರನಟಿ ತಾರಾ ಹೇಳಿದರು.

ಬೆಂಗಳೂರು ಉತ್ತರ ತಾಲೂಕು ಬಿ.ಕೆ. ಹಳ್ಳಿ ಗ್ರಾಮ ಪಂಚಾಯಿತಿಯ ಬಾಗಲೂರು ವೃತ್ತ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಮಂಚನಪನಹಳ್ಳಿ ಗೇಟ್ ಬಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮೂಹಿತ ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಬಾಗಿನ ನೀಡಿ ಮಾತನಾಡಿದರು.

ಮೊದಲ ಹೆರಿಗೆ ಸುಖಕರವಾಗಿ ಆಗಲಿ. ಆರೋಗ್ಯವಂತ ಮಗುವಿಗೆ ಜನ್ಮ ನೀಡಲಿ ಎಂಬ ಕಾರಣಕ್ಕಾಗಿ ತುಂಬಾ ಹಿಂದಿನಿಂದ ಮಹಿಳೆಯರಿಗೆ ಗಂಡನ ಮನೆಯಲ್ಲಿ ಸೀಮಂತ ಮಾಡಿ, ತವರಿಗೆ ಕಳುಹಿಸಲಾಗುತ್ತದೆ. ಈ ಪದ್ಧತಿಯನ್ನು ಸಾಮೂಹಿಕವಾಗಿ ಆಚರಿಸಿದ್ದು ಸಂತಸದ ಸಂಗತಿ ಎಂದರು.

ಬಿ.ಕೆ. ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ಮಾತನಾಡಿ, ಬಿ.ಕೆ. ಹಳ್ಳಿ ಗ್ರಾಪಂನ ಬಾಗಲೂರು ಹಾಗೂ ಮಾರೇನಹಳ್ಳಿ ಗ್ರಾಪಂ ವ್ಯಾಪ್ತಿಯ 230 ಗರ್ಭಿಣಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹಿಂದು ಹೆಣ್ಣುಮಕ್ಕಳ ಜತೆಗೆ ಮುಸ್ಲಿಂ ಮಹಿಳೆಯರು ಇದರಲ್ಲಿ ಭಾಗಿಯಾಗಿದ್ದು ಸಂತಸ ಹೆಚ್ಚಿಸಿದೆ ಎಂದರು.

ಸಿಡಿಪಿಒ ವಿಜಯ್‌ಕುಮಾರ್, ಗ್ರಾಪಂ ಸದಸ್ಯರಾದ ಆಶಾ, ಆಂಜಿನಪ್ಪ, ಚೈತ್ರಾ, ಭಾರತಿ, ಮುನೇಗೌಡ, ಗಿರೀಶ್, ದೇವರಾಜ್, ಪುಷ್ಪಾ, ಪವಿತ್ರಾ, ಪವಿತ್ರಾ, ಶ್ವೇತಾ, ಜಯಲಕ್ಷ್ಮೀ, ಗಾಯತ್ರಿ, ಉಮಾ, ಭಾಗ್ಯಲಕ್ಷ್ಮೀ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net