ಹೆಣ್ಣನ್ನು ಗೌರವದಿಂದ ಕಾಣಿ

2608 DORANAHALLI 01
Published on

ದೋರನಹಳ್ಳಿ: ಹೆಣ್ಣನ್ನು ಪ್ರತಿಯೊಬ್ಬರೂ ಗೌರವದಿಂದ ಕಾರಣಬೇಕು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈರಣ್ಣ ಕಸನ್ ಹೇಳಿದರು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ವೈದ್ಯ ಸಿಬ್ಬಂದಿ ಗರ್ಭಿಣಿ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಿ ಹೆಣ್ಣಿಮಕ್ಕಳಿಗೆ ಪೂಜೆ, ಗೌರವದಿಂದ ಕಾಣುತ್ತಿವೆಯೇ ಅಲ್ಲಿ ದೇವರು ನೆಲೆಸಿರುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಹೆಣ್ಣನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬಿ ಹಾರೈಸುತ್ತಿರುವುದು ಶ್ಲಾಘನೀಯ. ಸರ್ಕಾರಿ ಆಸ್ಪತ್ರೆ ಎಂದರೆ ಚಿಕಿತ್ಸೆ ಪಡೆದುಕೊಳ್ಳಲು ಭಯ ಪಡುತ್ತಾರೆ. ಆದರೆ ನಮ್ಮ ಗ್ರಾಮದಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ವಿಶೇಷ ಕಾಳಜಿಯಿಂದ ಸಾರ್ವಜನಿಕರಲ್ಲಿ ಮತ್ತು ರೋಗಿಗಳಲ್ಲಿ ಇಂತಹ ಕರ‍್ಯಕ್ರಮ ಆಯೋಜಿಸುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ ಎಂದರು.

ವೈದ್ಯಾಧಿಕಾರಿ ಡಾ.ರಾಜೇಶ್ವರಿ ಗುತ್ತೇದಾರ್ ಮಾತನಾಡಿ, ಹೆರಿಗೆ ವೇಳೆ ತಮಗೆ ಯಾವುದೇ ತೊಂದರೆಯಾಗಬಾರದು ಎಂದು ಉಡಿ ತುಂಬಿ ಹಾರೈಸಲಾಗಿದೆ. ಅದೇ ರೀತಿ ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಶ್ರೀಕೃಷ್ಣ ಕೂಡ ನಿಮ್ಮನ್ನು ಆಶೀರ್ವದಿಸಲಿ ಎಂದರು. ಆಯುಷ್ ವೈದ್ಯೆ ಡಾ.ಗೀತಾ ಪಾಟೀಲ್, ಆಶಾ ಅಮೃತಾ, ಮಾತನಾಡಿದರು.

ಡಾ.ಪ್ರೀಯಾ, ಡಾ.ಕಾವೇರಿ, ಸಂಗೀತಾ, ಕಸ್ತೂರಿ, ವೆರೋನಿಕಾ, ಭೀಮಣ್ಣ ವನಿಗೇರಿ, ಆಶಾಗಳಾದ ನೂರ್‌ಜಾ, ಅಮೃತಾ, ಯಲ್ಲಮ್ಮ, ಶಶಿಕಲಾ, ಶರಣಮ್ಮ, ಕಲ್ಲಮ್ಮ, ಮೀನಾಕ್ಷಿ, ಸಾವಿತ್ರಿ, ಅಮೃತಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net