ಮೈಸೂರು: ಖಳನಾಯಕರಿಗೆ ವೀರಗಾಸೆ ಉಡುಪು ತೊಡಿಸುವ ಮೂಲಕ ಹೆಡ್‌ಬುಷ್ ಚಿತ್ರತಂಡ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಿದೆ. ಇಂತಹ ದೃಶ್ಯಗಳನ್ನು ತೆಗೆದು ಹಾಕಿ ಕಲಾವಿದರ ಕ್ಷಮೆ ಕೋರಬೇಕು ಎಂದು ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಒತ್ತಾಯಿಸಿದೆ.
ನಾವು ಯಾರ ವಿರುದ್ಧ ಅಥವಾ ಪರವೂ ಇಲ್ಲ. ನಮ್ಮ ಕಲೆಗೆ ಅನ್ಯಾಯವಾದಾಗ ಧ್ವನಿ ಎತ್ತುವುದು ನಮ್ಮ ಆದ್ಯ ಕರ್ತವ್ಯ. ಆದ್ದರಿಂದ ಚಿತ್ರತಂಡ ಕಲಾವಿದರ ಭಾವನೆ ಗೌರವಿಸಬೇಕು. ಇಲ್ಲವಾದರೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆ ಅಧ್ಯಕ್ಷ ಗಿರೀಶ್ ಶಿಚಾರ್ಚಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೀರಗಾಸೆ ಕಲಾವಿದರಾದ ದೇಬೂರು ನಟರಾಜು, ಕಿರಾಳು ಮಹೇಶ್. ಹಲರೆ ಬಸವಣ್ಣ, ರಘು, ಮನು, ಸ್ವಾಮಿ ಇತರರು ಇದ್ದರು.