ಹೆಜ್ಜೇನು ದಾಳಿಯಿಂದ ಆರು ಮಂದಿಗೆ ಗಾಯ

20 NRD-2
Published on

ನರಗುಂದ: ಹೆಜ್ಜೇನು ದಾಳಿಗೆ ಐವರು ಗಾಯಗೊಂಡ ಘಟನೆ ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಪಟ್ಟಣದ ಹಳೇ ಎಪಿಎಂಸಿ ಆವರಣದಲ್ಲಿರುವ ಜ್ಞಾನಮುದ್ರಾ ಪಬ್ಲಿಕ್ ಶಾಲೆಯ ಸಿಬ್ಬಂದಿ ನಾಗರಾಜ ಹೊಸಮನಿ, ಸಂಭಾಜಿ, ಸಿದ್ದಲಿಂಗಯ್ಯ, ಗಣೇಶ ಮರಿಗುದ್ದಿ, ಮಹಾದೇವಿ, ಪಾರಮ್ಮ ಪವಾರ ಎಂಬುವವರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ತಲೆ ಮತ್ತು ಮುಖದ ಭಾಗಕ್ಕೆ ಗಾಯಗಳಾಗಿವೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಾರಮ್ಮ ಪವಾರ ಎಂಬುವರಿಗೆ ಹೆಚ್ಚಿನ ಗಾಯಗಳಾಗಿವೆ. ನರಗುಂದದ ಹಳೇ ಎಪಿಎಂಸಿಯಲ್ಲಿರುವ ಅಶೋಕ ಮರಗಳಲ್ಲಿ ಎರಡು ಹೆಜ್ಜೇನು ಗೂಡುಗಳಿವೆ. ಗುರುವಾರ ಮಧ್ಯಾಹ್ನ ಮೂವರು ಯುವಕರು ಅಶೋಕ ಗಿಡದ ಎಲೆಗಳನ್ನು ಕೀಳುವಾಗ ಹೆಜ್ಜೇನು ಗೂಡಿಗೆ ಮರದ ರೆಂಬೆಗಳು ತಾಗಿವೆ. ಇದರಿಂದ ಗಾಬರಿಗೊಂಡ ಮೂವರು ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಅಲ್ಲಿಯೇ ಇದ್ದ ಆರು ಮಂದಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ. ಪಾರಮ್ಮ ಎಂಬುವರಿಗೆ ಹೆಚ್ಚಿನ ಗಾಯಗಳಾದ ಪರಿಣಾಮ ಶುಕ್ರವಾರವೂ ಚಿಕಿತ್ಸೆ ಮುಂದುವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net