

ಭಾಲ್ಕಿ: ಬಿಜೆಪಿ ಎಲ್ಲ ಕಾರ್ಯಕರ್ತರು ಹೆಚ್ಚೆಚ್ಚು ಗಿಡಗಳನ್ನು ನೆಡುವ ಮೂಲಕ ಅಭಿಯಾನದಲ್ಲಿ ಭಾಗವಹಿಸಬೇಕು. ಸ್ವಚ್ಛತಾ ಮತ್ತು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮಗಳನ್ನು ಕೂಡ ನಡೆಸಬೇಕು ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.
ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಪುಣ್ಯತಿಥಿ ಮತ್ತು ಜನ್ಮದಿನ ಆಚರಣೆ ಅಂಗವಾಗಿ ಪಟ್ಟಣದ ಗುರುಪ್ರಸನ್ನ ಪದವಿ ಕಾಲೇಜಿನ ಆವರಣದಲ್ಲಿ ಸೋಮವಾರ ತಾಲೂಕು ಬಿಜೆಪಿಯಿಂದ ಸಸಿಗಳನ್ನು ನೆಡುವ ಮೂಲಕ ಏಕ್ ಪೇಡ್ ಮಾ ಕೆ ನಾಮ್ (ಒಂದು ಗಿಡ ತಾಯಿ ಹೆಸರಿನಲ್ಲಿ) ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ಕಾರಬಾರಿ, ಮಾಜಿ ಅಧ್ಯಕ್ಷ ಗೋವಿಂದರಾವ ಬಿರಾದಾರ್, ಪ್ರಮುಖರಾದ ಬಾಬುರಾವ ಧೂಪೆ, ಪಂಡರಿ ಮೇತ್ರೆ ಇತರರಿದ್ದರು.