

ಕಲಬುರಗಿ: ತಾಲೂಕಿನ ಕೊಳ್ಳೂರು ಗ್ರಾಮದ ಸಮೀಪದಲ್ಲಿ ಅಫಜಲಪುರ ಹೆದ್ದಾರಿಯಲ್ಲಿ ಹೆಚ್ಚುವರಿ ಎಸ್‌ಪಿ ಇದ್ದ ಕಾರ್ ಭಾನುವಾರ ಅಪಘಾತಕ್ಕೀಡಾದ ಕುರಿತು ಸಂಚಾರಿ ಠಾಣೆ ೧ರಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೇದೆ ಗೌತಮ್ ಕಾರ್ ಚಾಲಕ ರವಿಕುಮಾರ ವಿರುದ್ಧ ದೂರು ನೀಡಿದ್ದಾರೆ. ಜು.೧೪ರಂದು ದೇವಲಗಾಣಗಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಲು ಹೋಗುವಾಗ ಘಟನೆ ನಡೆದಿದ್ದು, ಕಾರ್‌ನಲ್ಲಿ ಹೆಚ್ಚುವರಿ ಎಸ್‌ಪಿ (ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖಿಸಿಲ್ಲ) ಸೇರಿ ಮೂವರು ಹೋಗುವಾಗ ಹಸು ಎದುರು ಬಂದಿದೆ. ಆ ವೇಳೆ ಚಾಲಕ ರವಿಕುಮಾರ ಕಾರ್ ತಿರುಗಿಸಿದ್ದು, ಟೈರ್ ಬ್ಲಾಸ್ಟ್ ಆಗಿದೆ. ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಲ್ಲು, ಕಂಟಿಗಳಿಗೆ ತಾಗಿದೆ. ನಂತರ ಕಾರ್‌ನ್ನು ರಸ್ತೆ ಮೇಲೆ ತಂದಿದ್ದು, ಮೂವರಿಗೂ ಯಾವುದೇ ಗಾಯವಾಗಿಲ್ಲ. ಕಾರು ಜಖಂಗೊAಡಿದೆ. ಅತಿವೇಗದಿಂದ ಚಲಾಯಿಸಿ ಅಪಘಾತ ಮಾಡಿದ ಚಾಲಕ ರವಿಕುಮಾರ ವಿರುದ್ಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.