ಹೆಚ್ಚುವರಿ ಅಂಕದಿಂದ ಪ್ರಥಮ ಸ್ಥಾನ ಪಡೆದ ಐಶ್ವರ್ಯಗೆ ಸನ್ಮಾನ

bkt-27-1
Published on

ಬಾಗಲಕೋಟೆ: ಮರು ಮೌಲ್ಯ ಮಾಪದಿಂದ ಹೆಚ್ಚುವರಿಯಾಗಿ 4 ಅಂಕಗಳನ್ನು ಪಡೆಯುವ ಮೂಲಕ ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದುಕೊಂಡ ಐಶ್ವರ್ಯ ಕೌಜಲಗಿ ಅವರನ್ನು ಜಿ.ಪಂ ಸಿಇಓ ಶಶಿಧರ ಕುರೇರ ತಾವು ಕುಳಿತುಕೊಳ್ಳುವ ಚೇರ್ ಮೇಲೆ ಕೂಡ್ರಿಸಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.

ತೇರದಾಳ ಜೆ.ವಿ ಮಂಡಳ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಐಶ್ವರ್ಯ ಕೌಜಲಗಿ ಪಿಯುಸಿ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 586 ಅಂಕಗಳನ್ನು ಪಡೆದುಕೊಂಡಿದ್ದರು. ಆದರೆ ಅಂಕಗಳು ಕಡಿಮೆ ಬಂದಿರುವದನ್ನು ತಿಳಿದು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ ಪರಿಣಾಮ ಹೆಚ್ಚುವರಿ 4 ಅಂಕದಿಂದ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವದ ಜೊತೆಗೆ ರಾಜ್ಯ್ಕಕೆ 7ನೇ ರ್ಯಾಂಕ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಯನ್ನು ಕಂಡು ಜಿ.ಪಂ ಸಿಇಓ ತಮ್ಮ ಚೇರ ಮೇಲೆ ಕೂಡ್ರಿಸಿ ಸನ್ಮಾನಿಸಿರುವುದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದಂತಾಗಿದೆ.

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಟ್ಟಣಶೆಟ್ಟಿ ಸೇರಿದಂತೆ ಜೆ.ವಿ ಮಂಡಳ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net