ಹೆಚ್ಚುತ್ತಿರುವ ಕರೊನಾ; ಶಾಸಕ ಯಶವಂತರಾಯಗೌಡ ಹೇಳಿದ್ದೇನು ಗೊತ್ತಾ?

IMG-20210402-WA0096
Published on

ವಿಜಯಪುರ: ದೇಶದಲ್ಲಿ ಕರೊನಾ ಎರಡನೇ ಅಲೆ ಆರಂಭವಾಗಿದ್ದು ಎಲ್ಲರೂ ಜಾಗೃತರಾಗಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾರ್ವಜನಿಕ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಮುಂದೂಡಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸರ್ಕಾರ ಈಗಾಗಲೇ ಲಸಿಕೆ ಅಭಿಯಾನ ಆರಂಭಿಸಿದೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಜನರು ಗುಂಪು ಗುಂಪಾಗಿರುವುದನ್ನು ಬಿಟ್ಟು ಆದಷ್ಟು ದೂರ-ದೂರ ನಿಂತುಕೊಂಡು ಮಾತನಾಡಿ, ಸದ್ಯ ಕರೊನಾ ತೀವ್ರತೆ ಹೆಚ್ಚಾಗುತ್ತಿರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯಬೇಡಿ ಎಂದು ಶುಕ್ರವಾರ ಸುದ್ದಿಗಾರರ ಮೂಲಕ ತಿಳಿಸಿದರು.

ಕರೊನಾದಿಂದ ಶಾಲೆ-ಕಾಲೇಜ್ ಸ್ಥಗಿತಗೊಳ್ಳುತ್ತಿರುವುದರಿಂದ ಮಕ್ಕಳ ಬದುಕು ಹಾಳಾಗುತ್ತಿದೆ. ಆದಷ್ಟು ತಂತ್ರಜ್ಞಾನದ ಸಹಾಯದಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಿ. ಮಕ್ಕಳನ್ನು ಎಲ್ಲೂ ಹೊರಗಡೆ ಬಿಡಬೇಡಿ. ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net