ಹೆಚ್ಚುತ್ತಿದೆ ಸೈಬರ್​ ಕೆಂ ಪ್ರಕರಣಗಳು : 2 ತಿಂಗಳಲ್ಲಿ 40 ಕೇಸುಗಳು ದಾಖಲು, ಗ್ರಾಹಕರ ಅರಿವಿಗೆ ಬಾರದಂತೆ ಹಣ ದೋಚುವ ಜಾಲ

1
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ

ಜಿಲ್ಲೆಯಲ್ಲಿ ಆನ್​ಲೈನ್​ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಜನತೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಎಲ್ಲವೂ ಡಿಜಿಟಲೀಕರಣಗೊಂಡು ಆನ್​ಲೈನ್​ ಮೂಲಕವೇ ಎಲ್ಲ ವ್ಯವಹಾರ ನಡೆಯುತ್ತಿರುವ ನಡುವೆಯೇ ತಮ್ಮ ಅರಿವಿಗೆ ಬಾರದೆ ಸೈಬರ್​ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಕಳೆದ 2 ತಿಂಗಳಿಂದ ಜಿಲ್ಲೆಯ ಸಿಎನ್​ಇ (ಸೈಬರ್​, ನಾಕೋರ್ಟಿಕ್ಸ್​ ಮತ್ತು ಎಕನಾಮಿಕ್​) ಠಾಣೆಯಲ್ಲಿ 40 ಪ್ರಕರಣ ದಾಖಲಾಗಿವೆ.

ಹಣ ದ್ವಿಗುಣಗೊಳಿಸುವುದು, ಉಡುಗೊರೆ ನೀಡಿಕೆ, ಕೆವೈಸಿ ಅಪ್​ಡೇಟ್​ಗೆ ಒಟಿಪಿ ಕೇಳಿ ಹೀಗೆ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಅಮಾಯಕರ ಬ್ಯಾಂಕ್​ ಖಾತೆಯಿಂದ ಹಣ ಲಪಟಾಯಿಸುವುದು, ಮೊಬೈಲ್​ ಇಲ್ಲವೆ, ಇಮೇಲ್​ಗಳಿಗೆ ಲಿಂಕ್​ಗಳ ಮೂಲಕ ಸಂದೇಶಗಳನ್ನು ರವಾನಿಸಿ ಗ್ರಾಹಕರನ್ನು ದಾರಿ ತಪ್ಪಿಸಿ ಹಣ ದೋಚಲಾಗುತ್ತಿದೆ. ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ಕೆಲವರಿಗೆ ವಾಟ್ಸ್​ಆ್ಯಪ್​ ವೀಡಿಯೋ ಕಾಲ್​ ಮಾಡಿ, ಬೆತ್ತಲೆ ಹುಡುಗಿಯೊಂದಿಗೆ ಇರುವಂತೆ ಮ್​ಾರ್ ಮಾಡಿ ಹಣಕ್ಕೆ ಬೇಡಿಕೆ ಇಡುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಸಾಲ ಪಡೆಯದಿದ್ದರೂ ಸಾಲ ಪಡೆದಿದ್ದೀರಿ ಮರುಪಾವತಿ ಮಾಡಿ ಎನ್ನುವುದು, ಒಂದು ವೇಳೆ ನಿರಾಕರಿಸಿದರೆ ಅಂತಹವರ ಬಗ್ಗೆ ಅವಹೇಳನಕಾರಿಯಾಗಿ ಸಂದೇಶಗಳನ್ನು ಕಳಿಸಿ ಬ್ಲಾಕ್​ಮೇಲ್​ ಮಾಡಿ ಬೆದರಿಸುವ ಮತ್ತೊಂದು ಸೈಬರ್​ ಅಪರಾಧಗಳು ದಾಖಲಾಗುತ್ತಿವೆ.

ಹೊಸ ಅವತಾರ: ನೀವು ಸಾಲ ಪಡೆದಿದ್ದೀರಿ, ಮರು ಪಾವತಿಸಿ ಎಂದು ವಾಟ್ಸ್​ಆ್ಯಪ್​ ನಂಬರಿಗೆ ಲಿಂಕ್​ ಸಮೇತ ಸಂದೇಶ ಕಳಿಸಲಾಗುತ್ತದೆ. ಆ ಲಿಂಕ್​ ಮೇಲೆ ಕ್ಲಿಕ್​ ಮಾಡಿದರೆ ಸಾಕು. ಗೂಗಲ್​ ಖಾತೆ ಮೂಲಕ ನಮ್ಮ ಎಲ್ಲ ೋನ್​ ನಂಬರ್​ಗಳು, ೋನಿನಲ್ಲಿನ ೋಟೊ, ಆಧಾರ್​, ಪ್ಯಾನ್​ ಸೇರಿ ಎಲ್ಲವೂ ಖದೀಮರ ಕೈಸೇರುತ್ತದೆ.

ಅಲ್ಲಿಂದ ಕಿರುಕುಳ ಶುರುವಾಗಲಿದ್ದು, ಸಾಲ ಪಡೆಯದ ಅಮಾಯಕರು ಈ ಸುಳಿಯಲ್ಲಿ ಸಿಲುಕುತ್ತಾರೆ. ಅವರ ಎಲ್ಲ ಡೇಟಾಗಳನ್ನು ಕಳವು ಮಾಡಿ, ಅವರನ್ನೇ ಹೆದರಿಸಲಾಗುತ್ತಿದೆ. ಅವರ ಆಧಾರ್​ ಕಾರ್ಡ್​ಗಳ ಮೇಲೆ ಅಶ್ಲೀಲ ಬರಹಗಳನ್ನು ಬರೆದು, ಅಮಾಯಕರ ಎಲ್ಲ ಖಾತೆಗಳಿಗೂ ಶೇರ್​ ಮಾಡಿ ಹಣ ಕೇಳಲಾಗುತ್ತದೆ. ಈ ಸಂದರ್ಭದಲ್ಲಿ ಹೆದರಿ ಹಣ ನೀಡಿದರೆ ಸುಮ್ಮನಾಗುವ ಸೈಬರ್​ ಅಪರಾಧಿಗಳು, ಇಲ್ಲವಾದಲ್ಲಿ ನಿರಂತರವಾಗಿ ಈ ಪ್ರಕ್ರಿಯೆ ಮುಂದುವರಿಸುತ್ತಾರೆ. ಈ ಹಂತದಲ್ಲಿ ಅಪಮಾನಕ್ಕೆ ಅಂಜಿ ಬಲಿಪಶುಗಳು ಆತ್ಮಹತ್ಯೆ ಹಾದಿ ಹಿಡಿದಿರುವ ಉದಾಹರಣಗಳು ಇವೆ.

ಬಲಿಷ್ಠಗೊಳ್ಳಬೇಕಿದೆ ಸಿಎನ್​ಇ ಠಾಣೆ: ಸೈಬರ್​ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಬ್ಯಾಂಕ್​ಗಳು, ಆರ್​ಬಿಐ, ಪೊಲೀಸ್​ ಇಲಾಖೆ, ಹಲವಾರು ಸಹಾಯವಾಣಿಗಳನ್ನು ನೀಡಿವೆಯಾದರೂ, ಹೊಸ ರೂಪದಲ್ಲಿ ಸೈಬರ್​ ಅಪರಾಧಗಳು ನಡೆಯುತ್ತಿರುವುದು ಪೊಲೀಸ್​ ಇಲಾಖೆಗೆ ತಲೆನೋವಾಗಿದೆ. ಆದರೆ ಸೈಬರ್​ ಅಪರಾಧಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಂಪೂರ್ಣ ತರಬೇತಿ ಹೊಂದಿದ ಸಿಬ್ಬಂದಿ ಇಲ್ಲದೇ ಇರುವುದು ದೊಡ್ಡ ಹಿನ್ನಡೆಯಾಗಿದೆ. ಪ್ರತಿ ಜಿಲ್ಲೆಯಲ್ಲಿ ಈಗ ಸಿಎನ್​ಇ ಠಾಣೆಗಳು ಇವೆಯಾದರೂ ಇಲ್ಲಿರುವ ಸಿಬ್ಬಂದಿ ಯಾರೂ ಸೈಬರ್​ ಕೆಂ ಪತ್ತೆ ಹಚ್ಚುವಲ್ಲಿ ಪೂರ್ಣವಾಗಿ ಪರಿಣಿತಿ ಹೊಂದಿದವರಲ್ಲ. ಒಂದು ವೇಳೆ ತರಬೇತಿ ಪಡೆದಿದ್ದರೂ ಇಂತಿಷ್ಟು ವರ್ಷಗಳ ನಂತರ ಸಿಎನ್​ಇ ಹೊರತಾದ ಮತ್ತೊಂದು ಠಾಣೆಗೆ ವರ್ಗಾವಣೆಯಾಗುವುದರಿಂದ ಸದಾಕಾಲ ನುರಿತ ಸಿಬ್ಬಂದಿ ದೊರೆಯುವುದಿಲ್ಲ.

ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿ, ಇತ್ತೀಚೆಗೆ ಗುಪ್ತಚರ ಇಲಾಖೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿಕೊಂಡಂತೆ ಸಿಎನ್​ಇ ಠಾಣೆಗೂ ಪ್ರತ್ಯೇಕ ಸಿಬ್ಬಂದಿ ನೇಮಿಸಿ ತರಬೇತಿ ನೀಡಬೇಕಿದೆ. ಜತೆಗೆ ಅಗತ್ಯ ಪರಿಕರಗಳನ್ನು ಒದಗಿಸಬೇಕಿದೆ.

ಸಾರ್ವಜನಿಕರೇ ಎಚ್ಚರ: ಜಿಲ್ಲೆಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸೈಬರ್​ ಕೆಂಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಮೂಲ ಕಾರಣ ಸೈಬರ್​ ಅಪರಾಧಿಗಳ ಜಾಲದಲ್ಲಿ ಸಿಲುಕುವವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್​, ಇ&ಮೇಲ್​ ಸೇರಿ ಇತರ ಯಾವುದೇ ಸಂಪರ್ಕ ತಾಣಕ್ಕೆ ಅಪರಿಚಿತ ವ್ಯಕ್ತಿಗಳಿಂದ ಬರುವ ಸಂದೇಶಗಳಿಗೆ ಉತ್ತರಿಸುವ, ಲಿಂಕ್​ಗಳನ್ನು ತೆರೆಯುವ ಕೆಲಸ ಮಾಡಬೇಡಿ. ಇದರಿಂದ ಮೋಸ ಹೋಗುವುದನ್ನು ತಪ್ಪಿಸಬಹುದಾಗಿದೆ.

ಯಾವುದೇ ಸಾಲ ಪಡೆಯದಿದ್ದರೂ ನನ್ನ ಬಳಿ 5 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟರು. ನಿರಾಕರಿಸಿ ಅವರ ಮೊಬೈಲ್​ ಸಂಖ್ಯೆ ಬ್ಲಾಕ್​ ಮಾಡಿದೆ. ಆದರೂ ನನ್ನನ್ನು ರೇಪಿಸ್ಟ್​, ಲೋನ್​ ಕಳ್ಳ ಎಂದೆಲ್ಲ ಪೋನ್​ನಲ್ಲಿರುವ ಎಲ್ಲ ನಂಬರ್​ಗಳಿಗೂ ಸಂದೇಶ ಹಾಕಿದ್ದಾರೆ. ನನ್ನ ತೇಜೋವಧೆ ನಡೆದಿದೆ. ಸೈಬರ್​ ವಂಚನೆಗೊಳಗಾದವರು ಅಪರಿಚಿತ ಲಿಂಕ್​ಗಳನ್ನು ತೆರೆಯುವ ಕೆಲಸ ಮಾಡಬೇಡಿ. ಯಾವುದೇ ಥರ್ಡ್​ ಪಾರ್ಟಿ ಆ್ಯಪ್​ಗಳನ್ನು ಇನ್​ಸ್ಟಾಲ್​ ಮಾಡಿಕೊಳ್ಳಬಾರದು. ಮುಂಜಾಗ್ರತೆ ಇದ್ದರೆ, ಈ ಜಾಲದಿಂದ ತಪ್ಪಿಸಿಕೊಳ್ಳಬಹುದು. ನಾವು ಅಪರಾಧಿ-ಗಳನ್ನು ಹಿಡಿಯುತ್ತಲೇ ಇದ್ದೇವೆ. ಎಲ್ಲವೂ ಹೊರ ರಾಜ್ಯದಿಂದಲೇ ನಿರ್ವಹಣೆ ಆಗುತ್ತಿದ್ದು, ಸಾರ್ವಜನಿಕರು ಎಚ್ಚರವಾಗಿರಬೇಕು. ಕೆ.ಸಂತೋಷ್​ಬಾಬು, ಎಸ್​ಪಿ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net