ಹೆಚ್ಚುತ್ತಲೇ ಇದೆ ಕರೊನಾ ಸೋಂಕು

carona logo
Published on

ಗದಗ: ಜಿಲ್ಲೆಯಲ್ಲಿ ಮಂಗಳವಾರ 195 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 73 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಹುಡ್ಕೋ ಕಾಲನಿ, ಹಕಾರಿ ಗಲ್ಲಿ, ವೀರನಾರಾಯಣ ದೇವಸ್ಥಾನದ ಹಿಂದುಗಡೆ, ಸಂಭಾಪುರ ಪೊಲೀಸ್ ಕ್ವಾರ್ಟರ್ಸ್, ಪುಟ್ಟರಾಜ ನಗರ, ಎಸ್.ಬಿ. ನಗರ, ವೀರನಾರಾಯಣ ದೇವಸ್ಥಾನದ ಹತ್ತಿರ, ಬಸವೇಶ್ವರ ಓಣಿ, ಸ್ಟೇಷನ್ ರಸ್ತೆ, ಟ್ಯಾಗೋರ್ ರಸ್ತೆ, ಮಸಾರಿ, ವಿಠ್ಠಲ ಮಂದಿರ ರಸ್ತೆ, ಪಾರ್ಶ್ವನಾಥ ಸ್ಕೂಲ್, ದಾಸರ ಓಣಿ, ಹೆಲ್ತ್​ಕ್ಯಾಂಪ್, ವೀರೇಶ್ವರ ನಗರ, ಜಿಮ್್ಸ, ಎಸ್.ಎಂ.ಕೆ. ನಗರ, ರಾಜೀವಗಾಂಧಿ ನಗರ, ಕೆ.ವಿ. ನಗರ, ಸಾಯಿಬಾಬಾ ದೇವಸ್ಥಾನದ ಹತ್ತಿರ, ಸವೋದಯ ಕಾಲನಿ, ಬಾಲಾಜಿ ರಸ್ತೆ, ಶಿವಬಸವ ನಗರ, ಆದರ್ಶ ನಗರ, ಪಂಚಾಕ್ಷರಿ ನಗರ, ಕಳಸಾಪುರ ರಸ್ತೆ, ಕೆ.ಸಿ. ರಾಣಿ ರಸ್ತೆ, ಜೆ.ಟಿ. ಮಠ ರಸ್ತೆ, ವಕ್ಕಲಗೇರಿ ಓಣಿ, ಗಂಗಿಮಡಿ, ಬ್ಯಾಂಕರ್ಸ್ ಕಾಲನಿ, ವಕೀಲ ಚಾಳ, ಅಬ್ಬಿಗೇರಿ ಕಾಂಪೌಂಡ್, ಕೇಶವ ನಗರ, ಮುಕ್ತಿ ನಗರ, ಸಿದ್ಧಲಿಂಗ ನಗರ, ಕೆ.ಎಸ್.ಆರ್.ಟಿ.ಸಿ. ಕಾಲನಿ, ಗದಗ ತಾಲೂಕಿನ ಸೊರಟೂರ, ಹಿರೇಹಂದಿಗೋಳ, ಹೊಸೂರ, ಬಿಂಕದಕಟ್ಟಿ, ಕುರ್ತಕೋಟಿ, ಹೊಸಳ್ಳಿ, ಕುರಡಗಿ, ಮಲ್ಲಸಮುದ್ರ, ಕಣವಿ, ತಿಮ್ಮಾಪುರ, ಲಕ್ಕುಂಡಿ, ಚಿಂಚಲಿ.

ಮುಂಡರಗಿ ಪಟ್ಟಣದ ಟಿ.ಎಲ್.ಎಚ್., ದುರ್ಗಾದೇವಿ ದೇವಸ್ಥಾನದ ಹತ್ತಿರ, ದ್ಯಾಮವ್ವ ದೇವಸ್ಥಾನದ ಹತ್ತಿರ, ಮಠದ ವೃತ್ತ, ಜೆ.ಎಚ್.ಪಾಟೀಲ ನಗರ, ನೇಕಾರ ಓಣಿ, ಆಯುರ್ವೆದಿಕ್ ಕಾಲೇಜ್, ಎಚ್.ಎಂ.ನಗರ, ಮುಂಡರಗಿ ತಾಲೂಕಿನ ಡಂಬಳ, ಅತ್ತಿಕಟ್ಟಿ, ದಿಂಡೂರ ತಾಂಡಾ, ಮುಂಡವಾಡ, ಡೋಣಿ, ಹಮ್ಮಗಿ, ಎಕ್ಲಾಸಪೂರ, ಮಕ್ತುಂಪುರ, ಹಿರೇವಡ್ಡಟ್ಟಿ. ನರಗುಂದ ಪಟ್ಟಣದ ತಾಲೂಕು ಆಸ್ಪತ್ರೆ ಕ್ವಾರ್ಟರ್ಸ್, ಮಾರುತಿ ನಗರ, ಮಯೂರ ಟಾಕೀಜ್ ಹತ್ತಿರ, ಅರ್ಬಾನ ಬಡಾವಣೆ, ಟಿ.ಎಂ.ಸಿ.ರಸ್ತೆ, ನರಗುಂದ ತಾಲೂಕಿನ ಬೆನಕೊಪ್ಪ, ಶಿರೋಳ, ಕಳಕೇರಿ, ಸುರಕೋಡ. ರೋಣ ತಾಲೂಕಿನ ನರೇಗಲ್, ರೋಣ ತಾಲೂಕಿನ ಅಬ್ಬಿಗೇರಿ, ಕೋಡಿಕೊಪ್ಪ, ಬೆಳವಣಕಿ, ಸೂಡಿ, ಹೊಳೆಆಲೂರ, ಜಿಗಳೂರ, ರುದ್ರಾಪುರ, ಹುಲ್ಲೂರ, ಬೂದಿಹಾಳ, ಗಜೇಂದ್ರಗಡ ಪಟ್ಟಣದ ಸಿದ್ದಲಿಂಗೇಶ್ವರ ಟಾಕೀಜ್ ಹತ್ತಿರ, ವಾಟರ್ ಟ್ಯಾಂಕ್ ಹತ್ತಿರ, ನದಾಫ್ ಪ್ಲಾಟ್, ಸಿ.ಎಚ್.ಸಿ., ಶಿರಹಟ್ಟಿ ಪಟ್ಟಣದ ಸೋಮೇಶ್ವರ ನಗರ, ಮ್ಯಾಗೇರಿ ಓಣಿ, ಕೋಟಿ ಓಣಿ, ಹಳೇ ಎಸ್.ಬಿ.ಐ ಬ್ಯಾಂಕ್, ಶಿರಹಟ್ಟಿ ಪಟ್ಟಣದ ಬಡಿಗೇರ ಓಣಿ, ಶಿವಲಿಂಗಪ್ಪ ಬಡಾವಣೆ, ತಂಗೋಡಾ, ಅಂಬೇಡ್ಕರ್ ನಗರ, ನೀಲಗಾರ ಪ್ಲಾಟ್, ಶಿರಹಟ್ಟಿ ತಾಲೂಕಿನ ರಣತೂರ, ಬಾಲೇಹೊಸೂರ, ಹೆಬ್ಬಾಳ, ಬೆಳ್ಳಟ್ಟಿ, ಗೊಜನೂರ, ಕಡಕೋಳ, ಪೇಟಬಣ, ಕೋಗನೂರ,

ಲಕ್ಷ್ಮೇಶ್ವರದ ಬೇವಿನಮರದ ಓಣಿ, ಹಿರೇಬಣ, ಹಳ್ಳದಕೇರಿ ಓಣಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಗದಗ ತಾಲೂಕಿನ ಕಣವಿ ಗ್ರಾಮದ 6 ವರ್ಷದ ಪುರುಷ ಮತ್ತು ಗದಗ ನಗರದ ಮಕಾನಗಲ್ಲಿಯ ನಿವಾಸಿ 89 ವರ್ಷದ ಪುರುಷ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ವೈರಸ್ ತಡೆಗೆ ಕಟ್ಟುನಿಟ್ಟಿನ ಕ್ರಮ

ಗದಗ: ಜಿಲ್ಲೆಯಾದ್ಯಂತ ಕರೊನಾ ವೈರಸ್ ತಡೆಗಟ್ಟಲು ಪ್ರಸ್ತುತ ಕಂಟೇನ್ಮೆಂಟ್ ವಲಯಗಳಲ್ಲಿ ಮಾತ್ರ ಅನ್ವಯವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೆ. 1ರಿಂದ ಸೆ. 30ರ ಮಧ್ಯರಾತ್ರಿವರೆಗೆ ಅನ್​ಲಾಕ್ 4.0 ಮಾರ್ಗಸೂಚಿ ಜಾರಿಗೊಳಿಸಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಹೊರಡಿಸಿದ ಪ್ರತಿಬಂಧಕಾಜ್ಞೆಯನ್ನು ಮುಂದಿನ ಅವಧಿವರೆಗೆ ಮುಂದುವರಿಸಲು ಜಿಲ್ಲಾಧಿಕಾರಿ ಸುಂದರೇಶಬಾಬು ಆದೇಶಿಸಿದ್ದಾರೆ.

ಕೋವಿಡ್-19 ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ 65 ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರು, 10 ವರ್ಷದೊಳಗಿನ ಮಕ್ಕಳು, ಯಾವುದೇ ರೋಗ ಹೊಂದಿರುವ ವ್ಯಕ್ತಿಗಳು ಹಾಗೂ ಗರ್ಭಿಣಿಯರು ಆರೋಗ್ಯ ಅವಶ್ಯಕ, ಅನಿವಾರ್ಯ ಕಾರಣ ಹೊರತುಪಡಿಸಿ ಅವರು ಮನೆಯಲ್ಲಿಯೇ ಇರಬೇಕು ಮತ್ತು ಕಂಟೇನ್ಮೆಂಟ್ ವಲಯಗಳಲ್ಲಿ ಪ್ರತಿಬಂಧಕಾಜ್ಞೆ ಅವಧಿಯನ್ನು ಸೆ. 1 ರಿಂದ ಸೆ. 30 ರವರೆಗೆ ವಿಸ್ತರಿಸಲಾಗಿದೆ. ಕೋವಿಡ್ -19 ನಿರ್ವಹಣೆಯ ಸಂಬಂಧ ನಿರ್ದಿಷ್ಟಪಡಿಸಿದಂತೆ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ 117 ಪ್ರದೇಶಗಳು ಪ್ರತಿಬಂಧಿತ

ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕು ಸಕಾರಾತ್ಮಕ ಕಂಡುಬಂದ 117 ಪ್ರದೇಶಗಳನ್ನು ಪ್ರತಿಬಂಧಿತ ಪ್ರದೇಶಗಳೆಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಘೊಷಿಸಿದ್ದಾರೆ.

ಗದಗ-ಬೆಟಗೇರಿ ನಗರದ ರಾಜೀವಗಾಂಧಿ ನಗರ, ವಿಜಯನಗರ ಸ್ಕೂಲ್ ಹತ್ತಿರ, ಆರ್.ಕೆ. ನಗರ, ಸರಾಫ್ ಬಜಾರ್, ಟರ್ನಲ್ ಪೇಟೆ, ಹವಾಮಾನ ಕಚೇರಿ ಹತ್ತಿರ, ಸಿದ್ಧಲಿಂಗ ನಗರ, ಈಶ್ವರ ನಗರ, ಒಕ್ಕಲಗೇರಿ ಓಣಿ, ಮಂಜುನಾಥ ನಗರ, ನಾಡಕಚೇರಿ ಹತ್ತಿರ, ಜನತಾ ಕಾಲನಿ, ಇರಾನಿ ಕಾಲನಿ, ಬಾಪೂಜಿ ನಗರ, ಪಂಚಾಕ್ಷರಿ ನಗರ, ಗುಜ್ಜರ ಬಸ್ತಿ, ಮುಳಗುಂದ ನಾಕಾ, ಸವೋದಯ ಕಾಲನಿ, ಕಣವಿ ಪ್ಲಾಟ್, ಟೆಂಗಿನಕಾಯಿ ಬಜಾರ, ಶರಣ ಬಸವೇಶ್ವರ ನಗರ, ಹುಡ್ಕೋ ಕಾಲನಿ, ರೈಲ್ವೆ ಪೊಲೀಸ್ ಕ್ವಾರ್ಟರ್ಸ್, ಸಾಯಿನಗರ 2ನೇ ಕ್ರಾಸ್, ಗದಗ ತಾಲೂಕಿನ ಕೋಟುಮಚಗಿ ವಾರ್ಡ್ ನಂ.1, ಹೊಸೂರ ವಾರ್ಡ್ ನಂ.2, ಸಂಭಾಪುರ ರಸ್ತೆ ವಾರ್ಡ್ ನಂ.27, ಬಿಂಕದಕಟ್ಟಿ ವಾರ್ಡ್ ನಂ.2, ಹುಲಕೋಟಿಯ ವಾರ್ಡ್ ನಂ 5, 8 ಮತ್ತು ವೆಂಕಟೇಶನಗರ ವಾರ್ಡ್ ನಂ. 5, ಸೊರಟೂರ ವಾರ್ಡ್ ನಂ.1, ಅಡವಿ ಸೋಮಾಪುರ ಸಣ್ಣ ತಾಂಡಾ ವಾರ್ಡ್ ನಂ.4, ಕಳಸಾಪುರ ವಾರ್ಡ್ ನಂ.2, ನಾಗಾವಿ ಬಯಲು ರಂಗಮಂದಿರ ವಾರ್ಡ್ ನಂ. 1, ಬಿಂಕದಕಟ್ಟಿ ವಾರ್ಡ್ ನಂ. 2, ಲಕ್ಕುಂಡಿ ವಾರ್ಡ್ ನಂ. 2, ಬೆಳದಡಿ ತಾಂಡಾ ವಾರ್ಡ್ ನಂ. 3, ಸೊರಟೂರ ವಾರ್ಡ್ ನಂ. 1, ಚಿಂಚೋಳಿ ಮೈಲಾರಲಿಂಗೇಶ್ವರ ದೇವಸ್ಥಾನ ವಾರ್ಡ್ ನಂ. 1, ಹೊಂಬಳದ ಪ್ಯಾಟಿ ಓಣಿ ವಾರ್ಡ್ ನಂ. 3, ಮತ್ತು ಕಲಬಾವಿ ಓಣಿ ವಾರ್ಡ್ ನಂ. 2, ಹೊಂಬಳ ಆಶ್ರಯ ಕಾಲನಿ ವಾರ್ಡ್ ನಂ. 5, ಅಂತೂರ ವಾರ್ಡ್ ನಂ.1 ಪ್ರತಿಬಂಧಿತ ಪ್ರದೇಶಗಳಾಗಿವೆ.

ನರಗುಂದ ಪಟ್ಟಣದ ಟಿಎಂಸಿ ರಸ್ತೆ ವಾರ್ಡ್ ನಂ.8, ಶಂಕರಲಿಂಗ ಓಣಿ ವಾರ್ಡ್ ನಂ 8, 19, 2ನೇ ಗಲ್ಲಿ ವಾರ್ಡ್ ನಂ. 10, ಅಲ್ಲಮಪ್ರಭು ಶಾಲೆ ಹತ್ತಿರ ವಾರ್ಡ್ ನಂ. 18, ಪೊಲೀಸ್ ಸ್ಟೇಷನ್ ಹತ್ತಿರ ವಾರ್ಡ್ ನಂ. 17, ದಂಡಾಪುರ 3ನೇ ಗಲ್ಲಿ ವಾರ್ಡ್ ನಂ. 10, ವಿದ್ಯಾಗಿರಿ ವಾರ್ಡ್ ನಂ. 1, ನರಗುಂದ ತಾಲೂಕಿನ ಕೊಣ್ಣೂರು, ಶಿರೋಳ, ಭೈರನಹಟ್ಟಿ, ಚಿಕ್ಕನರಗುಂದ, ಮಾಗನೂರ, ಗುರ್ಲಕಟ್ಟಿ, ಹಾಲಬಾವಿ ಕೆರೆ ವಾರ್ಡ್ ನಂ 21 ಪ್ರತಿಬಂಧಿತ ಪ್ರದೇಶಗಳಾಗಿವೆ. ರೋಣ ತಾಲೂಕಿನ ಅಮರಗಟ್ಟಿ, ಹಿರೇ ಅಳಗುಂಡಿ, ನಾಗರಾಳ ಆಶ್ರಯ ಪ್ಲಾಟ್ ವಾರ್ಡ್ ನಂ.1, ಹೊಳೆಆಲೂರ ಗಂಗೋಜಿ ಓಣಿ ವಾರ್ಡ್ ನಂ.1, ಯಾವಗಲ್ ವಾರ್ಡ್ ನಂ.3, ಬೆನಹಾಳ ಪ್ಲಾಟ್ ಏರಿಯಾ ಹತ್ತಿರ ವಾರ್ಡ್ ನಂ.1, ಅಮರಗೋಳ ವಾರ್ಡ್ ನಂ.1, ಹೊಸಳ್ಳಿ, ಗೋಗೇರಿ ವಾರ್ಡ್ ನಂ. 2, ವಾರ್ಡ್ ನಂ. 21, ಅಬ್ಬಿಗೇರಿ ವಾರ್ಡ್ ನಂ. 3, ಹುಲ್ಲೂರು ಹುಡೇದಗಡಿ ವಾರ್ಡ್ ನಂ. 3, ಯಾವಗಲ್ ವಾರ್ಡ್ ನಂ.1 ಮತ್ತು 2 ಪ್ರತಿಬಂಧಿತ ಪ್ರದೇಶಗಳಾಗಿವೆ. ಮುಂಡರಗಿ ಪಟ್ಟಣದ ಎಸ್.ಎಸ್. ಪಾಟೀಲ ನಗರ ವಾರ್ಡ್ ನಂ.1, ವಿದ್ಯಾನಗರ ವಾರ್ಡ್ ನಂ.18, ಸುಕೋ ಬ್ಯಾಂಕ್ ಹತ್ತಿರ ವಾರ್ಡ್ ನಂ. 19, ಶಿರೋಳ ಪ್ರದೇಶ ವಾರ್ಡ್ ನಂ. 12, ಪಿಡಬ್ಲ್ಯುಡಿ ಕ್ವಾರ್ಟರ್ಸ್ ವಾರ್ಡ್ ನಂ.19, ಎ.ಬಿ. ನಗರ ವಾರ್ಡ್ ನಂ.20, ಗೋಂದಳಿ ಓಣಿ ಜಾಗೃತ ಸರ್ಕಲ್ ರೋಡ್ ವಾರ್ಡ್ ನಂ.14, ಬಿ. ಬಾಬು ಫೋಟೋ ಸ್ಟುಡಿಯೋ ರೋಡ್ ವಾರ್ಡ್ ನಂ.21, ಮುಂಡರಗಿ ತಾಲೂಕಿನ ಹಮ್ಮಿಗಿಯ ಬಸವಣ್ಣ ದೇವಸ್ಥಾನ ವಾರ್ಡ್ ನಂ.2, ಮೇವುಂಡಿ ಹುಚ್ಚಿರೇಶ್ವರ ನಗರ ವಾರ್ಡ್ ನಂ.3, ಬಿದರಳ್ಳಿಯ ಬಸಗೌಡ್ರ ಓಣಿ ವಾರ್ಡ್ ನಂ.1, ಡಂಬಳದ ಭೋವಿ ಓಣಿ ವಾರ್ಡ್ ನಂ.8, ಮುಂಡವಾಡ ವಾರ್ಡ್ ನಂ.2, ಹಾರೋಗೇರಿ ಜನತಾ ಪ್ಲಾಟ್ ವಾರ್ಡ್ ನಂ. 1, ಡೋಣಿಯ ಕುರುಬರ ಓಣಿ ವಾರ್ಡ್ ನಂ.1, ಭಜಂತ್ರಿ ಓಣಿ ವಾರ್ಡ್ ನಂ.3, ಕೋಟಿ ಓಣಿ ವಾರ್ಡ್ ನಂ.1, ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ನಗರ ವಾರ್ಡ್ ನಂ.16, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ವಾರ್ಡ್ ನಂ.4, ಉಳ್ಳಟ್ಟಿ ವಾರ್ಡ್ ನಂ.1, ಅಡರಕಟ್ಟಿ ಮರಡಮ್ಮನ ದೇವಸ್ಥಾನ ವಾರ್ಡ್ ನಂ.1, ಸೂರಣಗಿ ವಾರ್ಡ್ ನಂ.2, ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ವಾರ್ಡ್ ನಂ.1, ಹರಿಪುರ ವಾರ್ಡ್ ನಂ.2, ವಿಜಯನಗರ ವಾರ್ಡ್ ನಂ.16, ನಗರ ವಾರ್ಡ್ ನಂ.18, ಗಜೇಂದ್ರಗಡ ಪಟ್ಟಣದ ಹಿರೇಮನಿ ಪ್ಲಾಟ್ ವಾರ್ಡ್ ನಂ.20, ಮೇದಾರ ಓಣಿ ವಾರ್ಡ್ ನಂ.21, ನವನಗರ ವಾರ್ಡ್ ನಂ.20, ಕೆಎಚ್​ಡಿಸಿ ಕಾಲನಿ ವಾರ್ಡ್ ನಂ. 18, ಸಿಂಹಾಸನ ಪ್ಲಾಟ್ ವಾರ್ಡ್ ನಂ. 19, ಜವಳಿ ಪ್ಲಾಟ್ ವಾರ್ಡ್ ನಂ.22 ರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net