ಹೆಚ್ಚು ಶುಲ್ಕ ಭರಣ, ವಿವಿ ಆದೇಶಕ್ಕೆ ಎಬಿವಿಪಿ ಖಂಡನೆ

15 HKR 04
Published on

ಹಿರೇಕೆರೂರ: ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್, ಪ್ರೊಜೆಕ್ಟ್ ವರ್ಕ್ ಮತ್ತು ಪೈಲಡ್ ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಶುಲ್ಕ ಭರಿಸುವಂತೆ ವಿಶ್ವವಿದ್ಯಾಲಯದ ಆದೇಶ ಖಂಡಿಸಿ ತಾಲೂಕು ಎಬಿವಿಪಿ ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಪ್ರಾಚಾರ್ಯ ಡಾ.ಎಸ್.ಪಿ. ಗೌಡರ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಎಬಿವಿಪಿ ಸಂಚಾಲಕ ಮನು ಕಲಕೊಪ್ಪದ ಮಾತನಾಡಿ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್, ಪ್ರೊಜೆಕ್ಟ್ ವರ್ಕ್ ಮತ್ತು ಫಿಲ್ಡ್ ವರ್ಕ್​ಗೆ ಹೆಚ್ಚುವರಿಯಾಗಿ 535 ರೂ.ಗಳನ್ನು ಭರಿಸುವಂತೆ ಧಾರವಾಡದ ಕವಿವಿ ಆದೇಶ ಹೊರಡಿಸಿದೆ. ಈಗಾಗಲೇ ವಿದ್ಯಾರ್ಥಿಗಳು ಇಂಟರ್ನ್​ಶಿಪ್, ಪ್ರೊಜೆಕ್ಟ್ ವರ್ಕ್​ಗೆ ಸಾವಿರ ಹಾಗೂ 2 ಸಾವಿರ ರೂ. ಖರ್ಚು ಮಾಡಿಕೊಂಡಿದ್ದಾರೆ. ಇದರ ಹೊರತಾಗಿಯೂ 535 ರೂ. ಗಳನ್ನು ಭರಿಸುವಂತೆ ಆದೇಶ ಹೊರಡಿಸಿರುವುದು ಎಷ್ಟರ ಮಟ್ಟಿಗೆ ಸರಿ?. ಬಡ ವಿದ್ಯಾರ್ಥಿಗಳು ಈ ಶುಲ್ಕ ಕಟ್ಟಲಾಗದ ಪರಿಸ್ಥಿತಿ ಎದುರಾಗಿದೆ. ಅಧಿಕ ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ. ಕೂಡಲೆ ಈ ಆದೇಶ ಹಿಂಪಡೆದು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಎಬಿವಿಪಿ ರಾಜ್ಯ ಕಾರ್ಯಕಾರಿ ಸದಸ್ಯ ಪ್ರವೀಣ ಕೆ.ಎಂ., ಕಾರ್ಯಕರ್ತರಾದ ಅಭಿಷೇಕ ಕೆ.ಎಚ್., ಲಿಂಗರಾಜ, ಚಂದನ್ ತಿಪ್ಪಶೆಟ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net