ಹೆಚ್ಚು ತೆರಿಗೆ ವಸೂಲಿ ಮಾಡುವ ಸಿಬ್ಬಂದಿಗೆ ಸನ್ಮಾನ

CTD---0001
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ರಾಜ್ಯದ ಬೊಕ್ಕಸ ಭರ್ತಿಗೆ ಸರ್ಕಾರ ಜನರಿಗೆ ದರ ಏರಿಕೆ ಬರೆ ಹಾಕುತ್ತಿದೆ ಎಂಬ ಪ್ರತಿಪಕ್ಷಗಳ ಟೀಕೆ ನಡುವೆ, ರಾಜ್ಯದ 5949 ಗ್ರಾಪಂಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಿಗೆ ನಡೆಸಿದ ಪ್ರಾಮಾಣಿಕ ಪ್ರಯತ್ನದಿಂದ ಕೆಲ ಜಿಲ್ಲೆಗಳು ಈ ವಿಷಯದಲ್ಲಿ ಮುಂದಿದ್ದರೆ, ಕೆಲವು ಹಿಂದೆ ಬಿದ್ದಿವೆ.

ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸುವಂತಿಲ್ಲ, 15ನೇ ಹಣಕಾಸು ಆಯೋಗದ ಅನುದಾನದ ಮೊದಲ ಕಂತು ಈಗ ಬಿಡುಗಡೆಯಾಗಿದೆ. ಹೀಗಿರುವಾಗ ಸಂಪನ್ಮೂಲ ಕ್ರೂಢೀಕರಣಕ್ಕೆ ತೆರಿಗೆ ವಸೂಲಿ ಗ್ರಾಪಂಗಳಿಗೆ ಅನಿವಾರ್ಯವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲೂ ಉತ್ತಮ ಪ್ರಗತಿ ಸಾಧಿಸಬೇಕೆಂಬ ಗುರಿ ಹೊಂದಿರುವ ಜಿಪಂ, ತೆರಿಗೆ ವಸೂಲಿಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಗ್ರಾಪಂ ಪಿಡಿಒ, ಕಾರ್ಯದರ್ಶಿ, ಸಿಬ್ಬಂದಿಯನ್ನು ಸನ್ಮಾನಿಸುವ ಯೋಜನೆ ರೂಪಿಸಿದೆ.

ಚಿತ್ರದುರ್ಗ ತಾಪಂನಿಂದ ಹಲವರನ್ನು ಇತ್ತೀಚೆಗೆ ಗೌರವಿಸಲಾಗಿದೆ. ತೆರಿಗೆ ವಸೂಲಾಗದಿದ್ದರೆ ಶಿಸ್ತ ಕ್ರಮದ ಎಚ್ಚರಿಕೆ ಇದ್ದರೂ, ಉತ್ತಮ ಸಾಧನೆ ತೋರುವವರನ್ನು ಗೌರವಿಸುವುದರೊಂದಿಗೆ ಗರಿಷ್ಠ ಸಾಧನೆ ಮಾಡುವಂತೆ (ಈವರೆಗಿನ ಪ್ರಗತಿ ಶೇ.55)ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕಳೆದೊಂದು ತಿಂಗಳಲ್ಲಿ 8.39 ಕೋಟಿ ರೂ. ತೆರಿಗೆ ವಸೂಲಾಗಿದೆ. ಹಣಕಾಸು ಸಾಲಿನ ಅಂತ್ಯಕ್ಕೆ ಶೇ.100 ಪ್ರಗತಿ ಆಗದಿದ್ದರೂ ಶೇ.80-85 ರಷ್ಟು ತೆರಿಗೆ ವಸೂಲಿ ನಿರೀಕ್ಷಿಸಲಾಗಿದೆ.

ಯಾವ ಜಿಲ್ಲೆ, ಎಷ್ಟು ತೆರಿಗೆ ವಸೂಲಿ?

ಕಳೆದ ಏಪ್ರಿಲ್ 1ರಿಂದ ಜ. 3 ವರೆಗೆ ರಾಜ್ಯದ ಎಲ್ಲ ಗ್ರಾಪಂಗಳ ಪ್ರಸಕ್ತ ಸಾಲಿನ 1627.05 ಕೋಟಿ ರೂ. ಸಹಿತ ಒಟ್ಟು ಬಾಕಿ ತೆರಿಗೆ 3979.51 ಕೋಟಿ ರೂ.ಗಳ ಪೈಕಿ ಈವರೆಗೆ 896.65 ಕೋಟಿ ರೂ. ವಸೂಲಾಗಿದ್ದು, ಶೇ.55 ಸಾಧನೆಯಾಗಿದೆ. ಇದರಲ್ಲಿ ರಾಯಚೂರು ಶೇ.81, ಉತ್ತರ ಕನ್ನಡ ಶೇ.78 ಹಾಗೂ ಶಿವಮೊಗ್ಗ ಶೇ.77 ಪ್ರಗತಿ ಸಾಧಿಸಿವೆ.

ಯಾದಗಿರಿ ಜಿಲ್ಲೆಯಲ್ಲಿ 122 ಗ್ರಾಪಂಗಳಿದ್ದು, ಒಪನಿಂಗ್ ಬ್ಯಾಲೆನ್ಸ್ 45.85 ಕೋಟಿ ರೂ., ಕರೆಂಟ್ ಡಿಮ್ಯಾಂಡ್ 20.63 ಕೋಟಿ ರೂ., ಟೋಟಲ್ ಡಿಮ್ಯಾಂಡ್ 66.47 ಕೋಟಿ ರೂ.ಇದೆ. ಈವರೆಗೆ 6.41 ಕೋಟಿ ರೂ. ವಸೂಲಾಗಿದೆ. ಇದೇ ಕ್ರಮವಾಗಿ

ಮೈಸೂರು-256-79-88.76-167.76-30. 97.

ವಿಜಯನಗರ-137-49.07-27.02-76.09-10. 81.

ಚಾಮರಾಜನಗರ-130-43.91-19.29-63.19-7. 98.

ಹಾಸನ-264-58.53-49.35-107.88-22. 01.

ಬಳ್ಳಾರಿ-100-16.13-14.49-30.62-6.52.

ವಿಜಯಪುರ-211-98.70-42.35-141.05-19. 12.

ಬೀದರ್-185-75.93-24.77-100.70-11.31.

ಕಲಬುರುಗಿ-261-107.71-37.42-145.13-17.43.

ತುಮಕೂರು-330-81.24-73.01-154.25-34.67.

ಮಂಡ್ಯ 223-99.63-62.03-161.66-29.51.

ಕೊಪ್ಪಳ-153-42-21.08-63.08-10.49.

ಧಾರವಾಡ-146-48.15-26.18-74.33-14.11.

ಬೆಳಗಾವಿ-500-240.98-107.63-348.62-58.17.

ಚಿತ್ರದುರ್ಗ-189-62.70-38.87-101.57-21.30.

ಹಾವೇರಿ-223-73.12-40.33-113.45-22.12.

ಚಿಕ್ಕಬಳ್ಳಾಪುರ-157-59.98.33.71-93.69-18.90.

ಬೆಂಗಳೂರು ನಗರ-84-469.04-384.50-853.54-216.91.

ಕೋಲಾರ- 154-48.76-52.73-101.49-29.78.

ದಾವಣಗೆರೆ-194-38.03-36.34-74.37-20.67.

ರಾಮನಗರ-126-77.23-64.59-141.83-39.46.

ಉಡುಪಿ-155-14.45-36.90-51.35-23.32.

ದಕ್ಷಿಣ ಕನ್ನಡ-223-17.74-40.97-58.71.-26.14.

ಬಾಗಲಕೋಟೆ -195-74.07-31.48-105.55-20.10.

ಕೊಡಗು-102-13.53-15.46-28.99-10.36.

ಗದಗ-122-44.52-14.28-58.80-9.60.

ಬೆಂಗಳೂರು ಗ್ರಾಮಾಂ ತರ-101-158.71-128.59-287.30-87.71.

ಚಿಕ್ಕಮಗಳೂರು-226-52.50-33.80-86.30-23.32.

ಶಿವಮೊಗ್ಗ-262-28.46-26.70-55.16-20.44.

ಉತ್ತರ ಕನ್ನಡ -229-5.72-17.95-23.66-14.07

ರಾಯಚೂರು ಜಿಲ್ಲೆಯಲ್ಲಿ 179 ಗ್ರಾಪಂಗಳಿದ್ದು, ಒಪನಿಂಗ್ ಬ್ಯಾಲೆನ್ಸ್ 27.07 ಕೋಟಿ ರೂ.,ಕರೆಂಟ್ ಡಿಮ್ಯಾಂಡ್ 15.85 ಕೋಟಿ ರೂ.ಹಾಗೂ ಟೋಟಲ್‌ಡಿಮ್ಯಾಂಡ್ ಪೈಕಿ 42.93 ಕೋಟಿ ರೂ. ಮೊತ್ತದಲ್ಲಿ 12.92 ಕೋಟಿ ರೂ. ವಸೂಲಾಗಿದೆ.

---

ಕೋಟ್.

ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಸೂಲಿಗೆ ಸೂಚಿಸುವುದು ಸಾಮಾನ್ಯ, ಅಧಿಕಾರಿ, ಸಿಬ್ಬಂದಿ ಪ್ರೋತ್ಸಾಹಿಸುವುದೂ ಮುಖ್ಯ. ಹೆಚ್ಚು ತೆರಿಗೆ ವಸೂಲಿ ಮಾಡುವ ಪಿಡಿಒ, ಸಿಬ್ಬಂದಿ ಗೌರವಿಸಲು ಯೋಜಿಸಲಾಗಿದೆ. ಗ್ರಾಂಪಂಗಳ ಅಭಿವೃದ್ಧಿ ಕಾರ್ಯಗಳಿಗೆ, ಮೂಲ ಸೌಕರ್ಯ ಒದಗಿಸಲು ಗರಿಷ್ಠ ಪ್ರಮಾಣದ ತೆರಿಗೆ ವಸೂಲಿ ಅತ್ಯಗತ್ಯ.

ಎಸ್.ಜೆ. ಸೋಮಶೇಖರ್, ಸಿಇಒ, ಜಿಪಂ, ಚಿತ್ರದುರ್ಗ.

---

(ಸಿಟಿಡಿ 3 ಸಿಇಒ)(ಕಡತ ಚಿತ್ರ)

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಅರೇಹಳ್ಳಿಗೆ ಈಚೆಗೆ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಭೇಟಿ ನೀಡಿದ್ದ ಜಿಪಂ ಸಿಇಒ ಎಸ್. ಜೆ. ಸೋಮಶೇಖರ್, ಡಿಎಸ್ ಕೆ. ತಿಮ್ಮಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net