

ಯಾದಗಿರಿ: ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳ ಪೈಕಿ ಅತಿ ಹೆಚ್ಚು ಜನಪ್ರಿಯಗೊಂಡ ಯೋಜನೆ ಎಂದರೆ ಶಕ್ತಿ ಯೋಜನೆಯಾಗಿದೆ ಎಂದು ಜಿ¯್ಲÁ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಓರ್ಡಿಯಾ ಹೇಳಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ೫೦೦ ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ ಸಂಭ್ರಮದ ಹಿನ್ನೆಲೆಯಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್‌ಗೆ ಪೂಜೆ ಮಾಡಿ ಟಿಕೆಟ್ ವಿತರಿಸಿ ಮಾತನಾಡಿದರು.
ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಸ್ವತಂತ್ರವಾಗಿ ರಾಜ್ಯದ ಎಲ್ಲೆಡೆ ಉಚಿತ ಪ್ರಯಾಣಿಸಲು ಅನುಕೂಲವಾಗಿದೆ. ದೇಶ ಸುತ್ತು ಇಲ್ಲವೇ ಕೋಶ ಓದು ಎಂಬ ಹಿನ್ನೆಲೆಯಲ್ಲಿ ಮಹಿಳೆಯರು ರಾಜ್ಯ ಸುತ್ತಿ ನಮ್ಮ ಐತಿಹಾಸಿಕ ಪರಂಪರೆ, ಇತಿಹಾಸ, ಸಂಸ್ಕöçತಿ ನೋಡಿ ತಿಳಿದುಕೊಂಡಿz್ದÁರೆ ಎಂದು ಹೇಳಿದರು.
ದೇವಸ್ಥಾನ, ಮದುವೆ ಹೀಗೆ ಅನೇಕ ಕಡೆಗಳಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಸಂಚರಿಸುವ ಮೂಲಕ ಹೊಸತನವನ್ನು ಅರಿತುಕೊಂಡಿz್ದÁರೆ ಎಂದರು.
ಜಿ¯್ಲÁ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯP್ಷÀ ಶರಣಿಕ ಕುಮಾರ ದೋಖಾ ಮಾತನಾಡಿ, ಎರಡು ವರ್ಷದಲ್ಲಿ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿ ಮಾಡಲಾಗಿದೆ ಎಂದರು. ಒಟ್ಟು ಈವರೆಗೆ ರಾಜ್ಯದ ಎಲ್ಲೆಡೆ ಐದು ನೂರು ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡುವ ಮೂಲಕ ಇದೊಂದು ಯಶಸ್ಸು ಕಂಡ ಯೋಜನೆಯಾಗಿದೆ ಎಂದರು. ಪಂಚ ಗ್ಯಾರಂಟಿಗಳ ಎಲ್ಲ ಯೋಜನೆಗಳು ಶೇ.೯೦ ಸಾಧನೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿ¯್ಲೆಯಲ್ಲಿ ಈ ಎಲ್ಲ ಯೋಜನೆಗಳು ಅಧಿಕ ಪ್ರಮಾಣದಲ್ಲಿ ಜಾರಿ ಮಾಡಲಾಗಿದೆ ಎಂದರು. ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ ಅವರ ಕಾರ್ಯವೈಖರಿಯಿಂದ ಮತ್ತು ಸಹಕಾರದಿಂದ ಇದು ಅತ್ಯಂತ ಯಶಸ್ಸು ಕಂಡಿದೆ ಎಂದರು.
ಈ ವೇಳೆ ಕಾಂಗ್ರೆಸ್ ಜಿ¯್ಲÁಧ್ಯP್ಷÀ ಬಸರೆಡ್ಡಿ ಅನಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸ್ಸಗೌಡ ಬಿಳ್ಹಾರ್, ಶ್ಯಾಮಸನ್‌ಮಾಳಿಕೇರಿ, ಯುವ ಮುಖಂಡ ಪಂಪನಗೌಡ ಚನ್ನಾರಡ್ಡಿ ಪಾಟೀಲ್, ಜಿಪಂ ಕಾರ್ಯದರ್ಶಿ, ವಿಜಯಕುಮಾರ ಮಡ್ಡೆ, ವಿಭಾಗೀಯ ಸಂಚಾರಾಧಿಕಾರಿ ವಿ.ಆರ್.ರೆಡ್ಡಿ, ವಿಭಾಗೀಯ ತಾಂತ್ರಿಕಾಧಿಕಾರಿ ಪ್ರಶಾಂತ ಸುರಪುರಕರ, ಘಟಕ ವ್ಯವಸ್ಥಾಪಕ ಶಂಶಾಕ್ ಬಾಬು, ವಿಭಾಗದ ಸಾರಿಗೆ ನೌಕರರ ಸಂಘದ ಅಧ್ಯP್ಷÀ ದೇವಿಂದ್ರಪ್ಪ ಮ್ಯಾಗೇರಿ, ತಾಲೂಕಿನ ಶಕ್ತಿ ಯೋಜನೆ ತಾಲೂಕಿನ ಸದಸ್ಯರಾದ ಅರ್ಜುನ ಪವಾರ, ಶಿವು ಕೊಲಿವಾಡ, ಮಹೇಶ ಬೋಜ್ಜಿ, ಮಲ್ಲಿಕಾರ್ಜುನ ಈಟೆ, ಮಹಿಳೆ ಮುಖಂಡರಾದ ನೀಲಾಫರ್ ಬಾದಲï, ಪದ್ಮಾವತಿ ಜಿ, ಸಿದ್ದಲಿಂಗಮ್ಮ ದದ್ದಲ್, ಮಲ್ಲಮ್ಮ ಕೋಮಾರ್, ನೀಲಮ್ಮ ಮುಳಾಗಸಿ, ಚಂದ್ರಕಲಾ ನಿಯಪ್ಪನೋರ್ ಇತರರಿದ್ದರು.