ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿ

17Kush02 (1)
ಕುಶಾಲನಗರದ ಆರ್‌ಎಂಸಿ ಆವರಣದಲ್ಲಿ ವರ್ಕರ್ಸ್ ಅಸೋಸಿಯೇಷನ್ ಸದಸ್ಯರು ಗಿಡಗಳನ್ನು ನೆಟ್ಟರು. ಕೆ.ವಿ.ಶಿವರಾಮ್, ಂ.ಎನ್.ಚಂದ್ರಮೋಹನ್, ಎಚ್.ಟಿ.ರವಿ,ಬಸವರಾಜ್, ದೇವಯ್ಯ, ಶ್ರವಣ್ ವಿಭೂತಿ, ಚೇತನ್ ಇದ್ದರು.
Published on

ಕುಶಾಲನಗರ: ಉತ್ತಮ ಪರಿಸರ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಮ್ ಹೇಳಿದರು.

ಸ್ಥಳೀಯ ವರ್ಕರ್ಸ್ ಅಸೋಸಿಯೇಷನ್, ಅರಣ್ಯ ಇಲಾಖೆ ಸಹಹೋಗದಲ್ಲಿ ಇಲ್ಲಿನ ಕೃಷಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ವಾತಾವರಣದಿಂದ ಉತ್ತಮ ಆರೋಗ್ಯ ಹೊಂದಬಹುದು. ಹಾಗಾಗಿ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ತಿಳಿಸಿದರು.

ಹಲವು ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಾಯುವಿಹಾರಕ್ಕೆ ಮಾಡುತ್ತಿರುವ 20ಕ್ಕೂ ಅಧಿಕ ವಾಯು ವಿಹಾರಿಗಳು ಇಲಾಖೆ ಸಿಬ್ಬಂದಿಯೊಂದಿಗೆ ಸೇರಿ ನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲು ನೆರವಾದರು.

ಕಾರ್ಯಕ್ರಮ ಸಂಯೋಜಕ ಎಂ.ಎನ್.ಚಂದ್ರಮೋಹನ್, ವಾರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಟಿ.ರವಿ, ಪ್ರಧಾನ ಕಾರ್ಯದರ್ಶಿ ಬಸವರಾಜ್, ಉಪ ವಲಯ ಅರಣ್ಯ ಅಧಿಕಾರಿಗಳಾದ ದೇವಯ್ಯ, ಶ್ರವಣ್ ವಿಭೂತಿ, ಚೇತನ್, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net