ಹೆಚ್ಚು ಇಳುವರಿಗೆ ಲಘು ಪೋಷಕಾಂಶ ಮುಖ್ಯ

18.02 hulsoor -1
Published on

ಹುಲಸೂರು: ರೈತರು ತಮ್ಮ ಜಮೀನಿನಲ್ಲಿ ಯಾವುದೇ ಬೆಳೆಯ ಹೆಚ್ಚು ಇಳುವರಿ ತೆಗೆಯಬೇಕಾದರೆ ಲಘು ಪೋಷಕಾಂಶ ಉಪಯೋಗಿಸುವುದು ಮುಖ್ಯವಾಗಿದೆ ಎಂದು ಹೈದರಾಬಾದ್ ನಾಗಾರ್ಜುನ ಕಂಪನಿ ವಿಜ್ಞಾನಿ ಡಾ. ಕಾಜಿ ಹೇಳಿದರು.

ಕೊಂಗಳಿ ಗ್ರಾಮದ ಪ್ರಗತಿಪರ ರೈತ ಭಗವಾನ ಡಾಂಗೆ ತೋಟದಲ್ಲಿ ಗುರುವಾರ ಆಯೋಜಿಸಿದ ಕಲ್ಲಂಗಡಿ ಕುರಿತು ಒಂದು ದಿನದ ರೈತ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಹುಲಸೂರು ಸುತ್ತಲಿನ ಕೊಂಗಳಿ, ಮೇಹಕರ್, ವಾಂಜರಖೇಡ್, ಜಾಮಖಂಡಿ, ಸಾಯಗಾಂವ ಸೇರಿ ವಿವಿಧ ಗ್ರಾಮಗಳಲ್ಲಿ ಮೇಲೊಡಿ ತಳಿಯ ಕಲ್ಲಂಗಡಿ ಬೆಳೆ ಉತ್ತಮ ಇಳುವರಿ ಕೊಡುತ್ತಿದೆ. ರೈತರು ಇದರ ಲಾಭ ಪಡೆದು ಆರ್ಥಿಕವಾಗಿ ಸದೃಢವಾಗಬೇಕು ಎಂದರು.

ಗುರುಪ್ರಸಾದ ಮೇಂಟೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳು ಜಾರಿಗೆ ತಂದಿವೆ. ಇದರ ಲಾಭ ಪಡೆಯಬೇಕು ಎಂದು ಹೇಳಿದರು.

ನಿರ್ದೇಶಕ ಕೇದಾರ ಕಾಂಬ್ಳೆ ಮಾತನಾಡಿದರು. ಜಿಪಂ ಮಾಜಿ ಸದಸ್ಯ ನಾಗನಾಥ ಬಗದೂರೆ, ಪ್ರಮುಖರಾದ ಭಗವಾನ ಡಾಂಗೆ, ಬಳವಂತರಾವ ಹೀರಾನಾಯಕ, ಏಕನಾಥ ಕಾರಬಾರಿ, ಗೋವಿಂದರಾವ, ಭಾಗವತ ಕಾರಬಾರಿ, ಚಾಂದಸೇಠ್, ಬ್ರಹ್ಮಾನಂದ, ಯೋಗೇಶ ಕಾರಬಾರಿ, ಶ್ರೀಕೃಷ್ಣ ಬಿರಾದಾರ, ಬಾಬುರಾವ ಚಾಂದಿವಾಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net