ಹೆಗ್ಗವಾಡಿಯಲ್ಲಿ ಕೃಷಿ ಶಿಬಿರ

23Rajesh4
Published on

ಚಾಮರಾಜನಗರ: ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಕೃಷಿ ಮಹಾ ವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಮಂಗಳವಾರ ಅಂತಿಮ ವರ್ಷದ ಬಿಎಸ್ಸಿ(ಆನರ್ಸ್) ಕೃಷಿ ವಿದ್ಯಾರ್ಥಿಗಳು ಪಾಲ್ಗೊಂಡರು.

ಶಿಬಿರದಲ್ಲಿ ರೈತರ ದಿನಚರಿ, ನಕ್ಷೆ, ಬೆಳೆ ಮತ್ತು ಜಾನುವಾರು ಗೋಪುರ, ಮಾಸಿಕ ಮಳೆ ವಿವರ, ಸಾಮಾಜಿಕ ಮತ್ತು ಸಂಪನ್ಮೂಲಗಳ ನಕ್ಷೆ, ಬೆಳೆ ಋತುಮಾನ ಚಕ್ರ, ಸಮಸ್ಯೆ ಮತ್ತು ಪರಿಹಾರ ವೃಕ್ಷ ಮುಂತಾದ ಮಾದರಿಗಳ ಮೂಲಕ ವಿವರವನ್ನು ಗ್ರಾಮಸ್ಥರಿಗೆ ತಿಳಿಸಲಾಯಿತು.

ಈ ವೇಳೆ ಕೃಷಿ ಮಹಾವಿದ್ಯಾಲಯದ ಸಂಯೋಜಕ ಡಾ. ನಾಗೇಶ್, ಕೃಷಿ ವಿಸ್ತರಣಾ ವಿಭಾಗದ ಡಾ ಪ್ರಕಾಶ್, ಬೇಸಾಯ ಶಾಸ್ತ್ರ ವಿಭಾಗ ಡಾ.ಮಹದೇವಯ್ಯ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net