ಹೆಗ್ಗವಾಡಿ ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣೆ

26Rajesh4
Published on

ಚಾಮರಾಜನಗರ: ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಪಶುಗಳ ಆರೋಗ್ಯ ತಪಾಸಣಾ ಶಿಬಿರ ನೆರವೇರಿತು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಹಸುವಿಗೆ ಪೂಜೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಗ್ರಾಮಸ್ಥರು ತಮ್ಮ ಪಶುಗಳ ಆರೋಗ್ಯ ತಪಾಸಣೆ ಮಾಡಿಸಿ, ಸೂಕ್ತ ಚಿಕಿತ್ಸೆ ಕೊಡಿಸಿದರು. ಒಟ್ಟು 48 ಹಸುಗಳು, 6 ಎತ್ತು, 2 ಮೇಕೆ, 3 ಕುರಿ, ಒಂದು ನಾಯಿ ತಪಾಸಣೆ ಮಾಡಲಾಯಿತು.

ಈ ಸಂದರ್ಭ ಹಸುಗಳ ಕೆಚ್ಚಲಿನಲ್ಲಿ ನರಗುಳ್ಳೆ, ಸರಿಯಾಗಿ ಮೇವು ತಿನ್ನದಿರುವುದು, ಹಾಲು ಉತ್ಪಾದನೆಯಲ್ಲಿ ಕ್ಷೀಣತೆ, ಜಂತು ಹುಳು ಸಮಸ್ಯೆಗಳು ಕಂಡುಬಂದವು. ಕೃಷಿ ಕಾಲೇಜು ಹಾಗೂ ಪಶು ಇಲಾಖೆಯ ವತಿಯಿಂದ ಉಚಿತವಾಗಿ ಔಷಧ ಮತ್ತು ಲಸಿಕೆಗಳನ್ನು ವಿತರಿಸಲಾಯಿತು. ಕೃಷಿ ವಿವಿ ವಿಶೇಷಾಕಾರಿ ಡಾ. ಸಿ.ದೊರೆಸ್ವಾಮಿ, ಸಂಯೋಜಕ ಡಾ.ಜಿ.ನಾಗೇಶ್, ತಜ್ಞರಾದ ಡಾ.ನಟರಾಜು, ಡಾ.ಮನೋಹರ, ರೇಖಾ, ಮುಖಂಡರಾದ ಚಿನ್ನಸ್ವಾಮಿ, ಪರಶಿವಮೂರ್ತಿ, ನಂದೀಶ ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net