

ಕಲಬುರಗಿ: ಪತ್ನಿಯೂ ಸಣ್ಣ ವಿಷಯಕ್ಕೆ ಜಗಳ ತೆಗೆದು ಕಟ್ಟಿಗೆಯಿಂದ ಹೊಡೆದಿದ್ದಾಳೆ ಎಂದು ಪತಿ ನೀಡಿದ ದೂರಿನ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಲ್ಶನ್ ಅರಾಫತ್ ಕಾಲನಿಯ ಅಫ್ಸರ್ ಮಿಯಾ ಪಟೇಲ್ ದೂರು ನೀಡಿದ ಪತಿ. ಸಣ್ಣ ವಿಷಯಕ್ಕೆ ಪತ್ನಿ ಖನೀಜ್ ಫಾತಿಮಾ ಜಗಳ ತೆಗೆದು ಬೈಯುತ್ತಿದ್ದಳು. ಈ ವೇಳೆ ಏಕೆ ಬೈಯುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾನೆ. ಆಗ ತವರು ಮನೆಯವರನ್ನು ಕರೆಸಿ, ಹೊಡೆಸುತ್ತೇನೆ ನಿನ್ನದು ಬಹಳ ಆಗಿದೆ ಎಂದು, ಕುಳಿತುಕೊಂಡಿದ್ದಾನೆ. ಆಗ ಪತ್ನಿ ಖನೀಜ್ ಫಾತಿಮಾ ಕಟ್ಟಿಗೆ ತೆಗೆದುಕೊಂಡು ಹೊಡೆದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.