

ಕಲಬುರಗಿ: ಹೃದ್ರೋಗದಿಂದ ಬಳಲುತ್ತಿರುವ ಮತ್ತು ಶಸ್ತ್ರ ಚಿಕಿತ್ಸೆ ನಂತರವೂ ಹೃದಯದ ಆರೋಗ್ಯವನ್ನು ಕಾಪಾಡಲು ಪುನ@ಶ್ಚೇತನ ಕೇಂದ್ರವನ್ನು ಉತ್ತರ ರ‍್ನಾಟಕದಲ್ಲೇ ಪ್ರಥಮ ಬಾರಿಗೆ ಲ್ೈ ಸಂಸ್ಥೆಯೊಂದಿಗೆ ನಗರದ ಹೀರಾಪುರ ಕರ‍್ಡಿಯಾಕ್ ರಿಯಾಬಿಲಿಟೇಷನ್ ಸೆಂಟರ್ನಲ್ಲಿ ಆರಂಭಿಸಲಾಗುತ್ತಿದೆ ಎಂದು ಹೃದ್ರೋಗ ವೈದ್ಯ ಡಾ.ಈರಣ್ಣ ಹೀರಾಪುರ ತಿಳಿಸಿದರು.
ಈ ಕೇಂದ್ರವೂ ಹೃದ್ರೋಗಿಯ ವೈಯಕ್ತಿಕ ಮೇಲ್ವಿಚಾರಣೆ ನಿರಂತರವಾಗಿ ಮಾಡಲಿದೆ. ಆಹಾರ, ವ್ಯಾಯಾಮ, ಒತ್ತಡ ನಿಯಂತ್ರಣ, ದುರಾಭ್ಯಾಸಕ್ಕೆ ಕಡಿವಾಣ ಹಾಕಿ, ಹೃದಯದ ಆರೈಕೆಗೆ ಸದಾ ನಿಗಾ ಇಡಲಿದೆ. ಕೇಂದ್ರಕ್ಕೆ ಭೇಟಿ ಆಗದಿರುವವರಿಗೆ ಲ್ೈ ಸಂಸ್ಥೆಯ ಆ್ಯಪ್ ಮೂಲಕ ನಿಯಂತ್ರಣ, ತಪಾಸಣೆ, ಸಲಹೆ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೋಗ ನಿಯಂತ್ರಣ ಮತ್ತು ಬಾರದಂತೆ ತಡೆಯಲು ಈ ಕೇಂದ್ರ ಪೂರಕವಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾಗ ಅಪಾಯಗಳನ್ನು ತಡೆಯಬಹುದಾಗಿದೆ. ಬಿಪಿ, ಕೊಲೆಸ್ಟ್ರಾಲ್, ಎಚ್ಬಿಎ ೧ಸಿ ಮತ್ತು ಒಟ್ಟಾರೆ ಯೋಗಕ್ಷೇಮ ನೋಡಿಕೊಳ್ಳಲಾಗುತ್ತದೆ. ವಿಶೇಷ ಕಿಟ್ಗಳನ್ನು ವಿತರಿಸಲಾಗುತ್ತದೆ. ದರ‍್ಕಾಲದ ಚಿಕಿತ್ಸಾ ಪದ್ಧತಿ ಇದಾಗಿದೆ ಎಂದು ಹೇಳಿದರು.
ಮೆಟ್ರೋ ಸಿಟಿಗಳಲ್ಲಿ ಇಂತಹ ಕೇಂದ್ರಗಳಿದ್ದು, ನಮ್ಮ ಭಾಗದ ಜನರಿಗೆ ಚಿಕಿತ್ಸೆ ನೀಡಲು ಇದು ಪೂರಕವಾಗಲಿದೆ. ಹೃದ್ರೋಗ ಸಮಸ್ಯೆ ಎದುರಾಗದಂತೆ, ಎದುರಾದ ಸಮಸ್ಯೆ ನಿಯಂತ್ರಿಸಲು ಈ ಪುನ@ಶ್ಚೇತನ ಕೇಂದ್ರ ಕೆಲಸ ಮಾಡಲಿದೆ ಎಂದರು.
ಲ್ೈ ಸಂಸ್ಥೆಯ ಜಯದೀಪ, ಶ್ರೀಧರ, ಸ್ಫರ‍್ತಿ ಇದ್ದರು.